ಒಬ್ಬರ ತಪ್ಪಿಗೆ ಇನ್ನೊಬ್ಬರಿಗೆ ಶಿಕ್ಷೆ ಯಾಕೆ ? ಜಾತಿ ಪ್ರಮಾಣಪತ್ರ ರದ್ದುಗೊಳಿಸಿದ್ದಕ್ಕೆ ಹೈಕೋರ್ಟ್‌ ತರಾಟೆ !

ಬೆಂಗಳೂರು: ಒಬ್ಬ ಸ್ಕಾಲರ್‌ಶಿಪ್‌ಗೋಸ್ಕರ ತಾನು ಬೇರೆ ಜಾತಿಯವನು ಅಂತ ಸುಳ್ಳು ದಾಖಲೆ ಕೊಟ್ಟಿದ್ದರಿಂದ ಆತನ ಸಹೋದರನ ಜಾತಿ ಪ್ರಮಾಣಪತ್ರ ರದ್ದಾಗಿತ್ತು. ಈ ಪ್ರಕರಣ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯವು ಒಬ್ಬನ ಕಾರಣಕ್ಕೆ ಮತ್ತೊಬ್ಬನ ಜಾತಿ ಪ್ರಮಾಣಪತ್ರ ರದ್ದು ಮಾಡಿದ್ದನ್ನು ತರಾಟೆಗೆ ತೆಗೆದುಕೊಂಡಿತು.

ಪ್ರಕರಣದ ವಿವರ:

ಪ್ರಭು ಹಾವೇರಿ ಎಂಬುವವರು ತಮ್ಮ ಜಾತಿ ಪ್ರಮಾಣಪತ್ರ ರದ್ದಾದ ಬಗ್ಗೆ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರ ಸಹೋದರ ಖಾಸಗಿ ಕಾಲೇಜಿಗೆ ಸೇರಿದಾಗ ಸುಣಗಾರ ಜಾತಿಗೆ ಸೇರಿದವನು ಎಂದು ಹೇಳಿಕೊಂಡಿದ್ದನು. ಆದರೆ, ಪ್ರಭು ಮತ್ತು ಅವರ ಕುಟುಂಬದ ಸದಸ್ಯರು ಹಿಂದೂ ಭೋವಿ ಜಾತಿಗೆ ಸೇರಿದವರು. ಈ ಕಾರಣದಿಂದ ಪ್ರಭು ಅವರ ಜಾತಿ ಪ್ರಮಾಣಪತ್ರವನ್ನು 2010 ರಲ್ಲಿ ತಹಶೀಲ್ದಾರ್ ರದ್ದುಗೊಳಿಸಿದ್ದರು.

ಇದನ್ನು ಪ್ರಶ್ನಿಸಿ ಪ್ರಭು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, “ಒಬ್ಬ ಸಹೋದರ ವಿದ್ಯಾರ್ಥಿವೇತನ ಪಡೆಯಲು ಬೇರೆ ಜಾತಿಯವನೆಂದು ಹೇಳಿಕೊಂಡ ಕಾರಣಕ್ಕೆ ಮತ್ತೊಬ್ಬರ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಲು ಸಾಧ್ಯವಿಲ್ಲ” ಎಂದು ತೀರ್ಪು ನೀಡಿದೆ.

ನ್ಯಾಯಾಲಯವು, “ಪ್ರಭು ಅವರ ಸಹೋದರ ವಿದ್ಯಾರ್ಥಿವೇತನಕ್ಕಾಗಿ ಸುಳ್ಳು ದಾಖಲೆಗಳನ್ನು ಸಲ್ಲಿಸಿರಬಹುದು, ಆದರೆ ಅದರಿಂದ ಪ್ರಭು ಅವರ ಜಾತಿ ಬದಲಾಗುವುದಿಲ್ಲ. ಪ್ರಭು ಮತ್ತು ಅವರ ಕುಟುಂಬದ ಸದಸ್ಯರು ಹಿಂದೂ ಭೋವಿ ಜಾತಿಗೆ ಸೇರಿದವರು ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಹೀಗಾಗಿ, ಪ್ರಭು ಅವರ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿರುವುದು ಸರಿಯಲ್ಲ” ಎಂದು ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read