HomeLatest NewsBREAKING : ರಾಜ್ಯದಲ್ಲಿ ಇದುವರೆಗೆ ಶೇ.4 ರಷ್ಟು ಮಾತ್ರ 'ಜಾತಿ ಗಣತಿ ಸಮೀಕ್ಷೆ' ಪೂರ್ಣಗೊಂಡಿದೆ :...

BREAKING : ರಾಜ್ಯದಲ್ಲಿ ಇದುವರೆಗೆ ಶೇ.4 ರಷ್ಟು ಮಾತ್ರ ‘ಜಾತಿ ಗಣತಿ ಸಮೀಕ್ಷೆ’ ಪೂರ್ಣಗೊಂಡಿದೆ : CM ಸಿದ್ದರಾಮಯ್ಯ

ಬೆಂಗಳೂರು : : ರಾಜ್ಯದಲ್ಲಿ ಇದುವರೆಗೆ ಶೇ.4 ರಷ್ಟು ಮಾತ್ರ ಸಮೀಕ್ಷೆ ಪೂರ್ಣಗೊಂಡಿದೆ. ರಾಜ್ಯಾದ್ಯಂತ ಇಂದಿನಿಂದ ಜಾತಿ ಗಣತಿ ಸರ್ವೇ ಕಾರ್ಯ ಚುರುಕಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ 4 ದಿನಗಳಿಂದ ಜಾತಿ ಗಣತಿ ಸರ್ವೇ ಕಾರ್ಯ ಕುಂಠಿತವಾಗಿತ್ತು. ಇಂದಿನಿಂದ ಜಾತಿ ಗಣತಿ ಸರ್ವೇ ಕಾರ್ಯ ಚುರುಕಾಗಲಿದೆ. ಈ ಸಂಬಂಧ ಎಲ್ಲಾ ಜಿಲ್ಲೆಯ ಡಿಸಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಡಿಸಿಗಳು ಹೇಳುವ ಪ್ರಕಾರ ಶೇ.90 ರಷ್ಟು ತಾಂತ್ರಿಕ ಸಮಸ್ಯೆ ಪರಿಹಾರ ಆಗಿದೆ. ಸರ್ವೆಗೆ ಏನೆಲ್ಲಾ ತೊಡಕು ಇದ್ದಾವೆ ಅದನ್ನು ಸರಿಪಡಿಸಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ಜಾತಿ ಗಣತಿ ವೇಗ ಹೆಚ್ಚಿಸಲು ಇಂದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ದಾರೆ. ಇಂದು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖುದ್ದು ಸಭೆ ನಡೆಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ. 4 ದಿನ ಕಳೆದರೂ ಸಮೀಕ್ಷೆ ಟೇಕಾಫ್ ಆಗಿಲ್ಲ. ಆದ್ದರಿಂದ ಸಮೀಕ್ಷೆಯ ವೇಗ ಹೆಚ್ಚಿಸಲು ಇಂದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ಕರೆದಿದ್ದಾರೆ. ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿ ಸಲಹೆ, ಸೂಚನೆಗಳನ್ನು ನೀಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular