HomeLatest Newsರಾಜ್ಯದಲ್ಲಿ'ಜಾತಿ ಗಣತಿ' : ಮನೆ ಮನೆ ಸಮೀಕ್ಷೆಗೆ ಇಂದು ತೆರೆ, ನ.10 ರವರೆಗೆ ಆನ್'ಲೈನ್' ಸಮೀಕ್ಷೆ...

ರಾಜ್ಯದಲ್ಲಿ’ಜಾತಿ ಗಣತಿ’ : ಮನೆ ಮನೆ ಸಮೀಕ್ಷೆಗೆ ಇಂದು ತೆರೆ, ನ.10 ರವರೆಗೆ ಆನ್’ಲೈನ್’ ಸಮೀಕ್ಷೆ ವಿಸ್ತರಣೆ.!

ಬೆಂಗಳೂರು : ಸೆಪ್ಟೆಂಬರ್ 22ರಿಂದ ರಾಜ್ಯದಲ್ಲಿ ಆರಂಭವಾಗಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಮನೆ ಮನೆ ಗಣತಿ ಕಾರ್ಯಕ್ಕೆ ಇಂದು ತೆರೆಬೀಳಲಿದೆ. ಗಣತಿಯಲ್ಲಿ ಭಾಗವಹಿಸಲು ಸಾಧ್ಯವಾಗದೆ ಇರುವವರಿಗಾಗಿ ನವೆಂಬರ್ 10ರ ವರೆಗೆ ಆನ್ಲೈನ್ ಸಮೀಕ್ಷೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಹಿಂವಕ 289 ಬಿಸಿಎ 2025, ದಿನಾಂಕ:13.08.2025 ರ ಅನ್ವಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಜನರ (ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ) ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ: 22.09.2025 ರಿಂದ ಪ್ರಾರಂಭಿಸಲಾಗಿದ್ದು, ದಿನಾಂಕ:31.10.2025 ರಂದು ಮುಕ್ತಾಯಗೊಳ್ಳಲಿದೆ.

ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರಿಗೆ ಅವಕಾಶ ನೀಡುವ ಹಿನ್ನೆಲೆಯಲ್ಲಿ https://kscbcselfdeclaration.karnataka.gov.in o wơ Online ಮೂಲಕ ಸ್ವಯಂ ಪಾಲ್ಗೊಳ್ಳುವ ಅವಧಿಯನ್ನು ದಿನಾಂಕ: 10.11.2025 ರ ವರೆಗೆ ಅಂತಿಮವಾಗಿ ವಿಸ್ತರಿಸಲಾಗಿದೆ ಎಂದು ಈ ಮೂಲಕ ಪ್ರಕಟಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular