ಕಿಡ್ನಾಪ್ ಆಗಿರುವುದಾಗಿ ಸುಳ್ಳು ಹೇಳಿ ಸ್ಪಾನಲ್ಲಿ ಕೆಲಸ ಕಳೆದುಕೊಂಡ ಮಹಿಳೆ

ತಾನು ಕಿಡ್ನಾಪ್ ಆಗಿರುವುದಾಗಿ ಸುಳ್ಳು ಹೇಳಿದ್ದ ಮಹಿಳೆ ಬರ್ಮಿಂಗ್‌ಹ್ಯಾಮ್‌ನ ಸ್ಪಾವೊಂದರಲ್ಲಿ ಕೆಲಸ ಕಳೆದುಕೊಂಡಿದ್ದಾಳೆ. ಅಪಹರಣಕ್ಕೊಳಗಾಗಿದ್ದೇನೆಂದು ಸುಳ್ಳು ಹೇಳಿದ ಮಹಿಳೆಯನ್ನ ಸ್ಪಾ ಕಚೇರಿಯು ಕೆಲಸದಿಂದ ತೆಗೆದುಹಾಕಿದ್ದು ಘಟನೆ ಬಳಿಕ ಆಕೆಯ ಸಹೋದ್ಯೋಗಿಗಳು ಮಹಿಳೆಯ ವರ್ತನೆಯಿಂದ ಆಕ್ರೋಶಗೊಂಡಿದ್ದಾರೆ.

ಅಲಬಾಮಾದ ಕಾರ್ಲೀ ರಸೆಲ್ ಎಂಬ ಮಹಿಳೆ ತುರ್ತುಸಂಖ್ಯೆಗೆ ಕರೆ ಮಾಡಿ ತನ್ನನ್ನು ಅಪಹರಣ ಮಾಡಲಾಗಿದೆ ಎಂದು ಹೇಳಿದ್ದಳು. ಆದರೆ ಜುಲೈ 13 ರಂದು ಅಲಬಾಮಾದ ಹೆದ್ದಾರಿಯಲ್ಲಿ ತನ್ನನ್ನು ಅಪಹರಣ ಮಾಡಲಾಗಿತ್ತೆಂದು ಮಹಿಳೆ ಆರೋಪಿಸಿದ್ದರೂ ಅದೇ ದಿನ ಆಕೆ ಬಸ್ ದರ ಮತ್ತು ಸಿನಿಮಾಗಳ ಬಗ್ಗೆ ಆನ್ ಲೈನ್ ನಲ್ಲಿ ಹುಡುಕಾಡಿದ್ದಳು. ಇದು ಆಕೆಯ ಅಪಹರಣದ ಬಗ್ಗೆ ಅನುಮಾನ ಹುಟ್ಟುಹಾಕಿತ್ತು. ಇತ್ತ ಕಾರ್ಲೀ ರಸೆಲ್ ನಾಪತ್ತೆ ಸ್ಪಾ ಸಿಬ್ಬಂದಿಗೂ ಆತಂಕ ಹುಟ್ಟಿಸಿತ್ತು. ಆಕೆಗಾಗಿ ಸಿಬ್ಬಂದಿ ಸಾಕಷ್ಟು ಹುಡುಕಾಡಿದ್ದರು. ಸ್ಪಾ ತುಂಬಾ ಬ್ಯುಸಿ ಇದ್ದ ದಿನದಂದೂ ಸಹ ಅವರು ಕೆಲಸ ಕಾರ್ಯ ಬಿಟ್ಟು ಆಕೆಯನ್ನ ವಾಪಸ್ ಮನೆಗೆ ಕರೆತರಲು ಸಾಕಷ್ಟು ಶ್ರಮಿಸಿದ್ದರು. ಆದರೆ ಆಕೆ ತಾನು ಅಪಹರಣಕ್ಕೊಳಗಾಗಿದ್ದೇನೆಂದು 911 ತುರ್ತು ಸಂಖ್ಯೆಗೆ ಕರೆ ಮಾಡಿ 2 ದಿನ ಕಣ್ಮರೆಯಾಗಿದ್ದಳು.

ಅವಳು ಸುಳ್ಳು ಹೇಳಿದ್ದಾಳೆಂದು ಗೊತ್ತಾದ ಬಳಿಕ ವುಡ್‌ಹೌಸ್ ಸ್ಪಾ ಗೆ ಕೆಟ್ಟ ಹೆಸರು ಬಂದಿತು. ಸಾಮಾಜಿಕ ಜಾಲತಾಣಗಳಲ್ಲಿ ಸ್ಪಾ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಲು ಶುರುಮಾಡಿದರು. ಇದರಿಂದ ಮಾಲೀಕ ಸ್ಟುವರ್ಟ್ ರೋಮ್ ಸಿಟ್ಟಿಗೆದ್ದು ಕಾರ್ಲೀ ರಸೆಲ್ ಳನ್ನು ವಜಾಗೊಳಿಸಿದ್ದಾರೆ.

ರಸೆಲ್ ಜೊತೆಗಿನ ಸಂಪರ್ಕದಿಂದಾಗಿ ನಮ್ಮ ಸ್ಪಾ ಸಾಮಾಜಿಕ ಮಾಧ್ಯಮದಲ್ಲಿ ಅಸಹ್ಯ ಸಂದೇಶಗಳು ಮತ್ತು ನಕಾರಾತ್ಮಕ ವಿಮರ್ಶೆಗಳನ್ನು ಸ್ವೀಕರಿಸುತ್ತಿದೆ ಎಂದು ಸ್ಪಾ ಮಾಲೀಕರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read