HomeLatest NewsBREAKING: ಸರಕು ಸಾಗಣೆ ಹಡಗಿನಲ್ಲಿ ಬೆಂಕಿ ಅವಘಡ: ಜೀವ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿದ ಸಿಬ್ಬಂದಿಗಳು; ಹಲವು...

BREAKING: ಸರಕು ಸಾಗಣೆ ಹಡಗಿನಲ್ಲಿ ಬೆಂಕಿ ಅವಘಡ: ಜೀವ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿದ ಸಿಬ್ಬಂದಿಗಳು; ಹಲವು ಕಂಟೇನರ್ ಗಳು ಸುಟ್ಟು ಭಸ್ಮ

ತಿರುವನಂತಪುರಂ: ಸರಕು ಸಾಗಣೆ ಹಡಗಿನಲ್ಲಿ ಏಕಾಏಕಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಕೋಝಿಕ್ಕೋಡ್ ನ ಬೇಪೋರ್ ಕರಾವಳಿ ಬಳಿ ನಡೆದಿದೆ.

ಎಂವಿ ವಾನ್ ಹೈ 503 ಎಂಬ ಹಡಗು ಕೊಲಂಬೋದಿಂದ ಮುಂಬೈಗೆ ತೆರಳುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 650 ಕಂಟೇನರ್ ಗಳಿದ್ದ ಹಡಗಿನಲ್ಲಿ ಚೀನಾ, ಮ್ಯಾನ್ಮಾರ್, ಇಂಡೋನೇಷ್ಯಾ, ಥೈಲ್ಯಾಂಡ್ ಗೆ ಸೇರಿದ 22 ಜನ ಸಿಬ್ಬಂದಿಗಳು ಇದ್ದರು. ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡು ಸಮುದ್ರ ಮಧ್ಯೆ ಹೊತ್ತಿ ಉರಿದಿದೆ. ಪ್ರಾಣ ಉಳಿಸಿಕೊಳ್ಳಲು 18 ಸಿಬ್ಬಂದಿಗಳು ಸಮುದ್ರಕ್ಕೆ ಹಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಕಿ ಅವಘಡದಲ್ಲಿ 20ಕ್ಕೂ ಹೆಚ್ಚು ಕಂಟೇನರ್ ಗಳು ಸಮುದ್ರಪಾಲಾಗಿವೆ. ಕರಾವಳಿ ಕಾವಲು ಪಡೆ, ನೌಕಾಪಡೆಯ ಹಡಗುಗಳು ಘಟನಾ ಸ್ಥಳಕ್ಕೆ ದೌಡಾಯಿಸಿ ಹಡಗಿನಲ್ಲಿದ್ದವರ ರಕ್ಷಣಾಕಾರ್ಯಾಚರಣೆ ನಡೆಸಿವೆ.

For Latest News Updates, Join Our Whatsapp Community🚩
RELATED ARTICLES

Most Popular