HomeKarnatakaಕಾರಿನಿಂದ ಡಿಕ್ಕಿ ಹೊಡೆದು ವೃದ್ಧನ ಬರ್ಬರ ಹತ್ಯೆ

ಕಾರಿನಿಂದ ಡಿಕ್ಕಿ ಹೊಡೆದು ವೃದ್ಧನ ಬರ್ಬರ ಹತ್ಯೆ

ಹಾಸನ: ದುಷ್ಕರ್ಮಿಗಳು ಕಾರಿನಿಂದ ಡಿಕ್ಕಿ ಹೊಡೆದು ಗುದ್ದಿ ವೃದ್ಧರೊಬ್ಬರನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ತಾಲೂಕಿನ ಮಾಯಸಮುದ್ರ ಬಳಿ ಈ ಘಟನೆ ನಡೆದಿದೆ. ಹಾಲಿನ ಡೇರಿ ವಿಚಾರವಾಗಿ ಗಲಾಟೆ ನಡೆದಿದ್ದು, ಈ ವೇಳೆ ದುಷ್ಕರ್ಮಿಗಳು ಕಾರಿನಿಂದ ವೃದ್ಧನಿಗೆ ಗುದ್ದಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಹಾಸನ ತಾಲೂಕಿನ ಉದ್ದೂರುಹಳ್ಳಿ ಗ್ರಾಮದ ಅಣ್ಣಪ್ಪ (64) ಕೊಲೆಯಾದ ದುದೈವಿ. ಘಟನೆಯಲ್ಲಿ ಮಂಜುನಾಥ್ ಎಂಬುವವರು ಗಂಭೀರ ಗಾಯಗೊಂಡಿದ್ದು ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಧರ್ಮ ಹಾಗೂ ಆತನ ಸಂಬಂಧಿ ಚಿದಾನಂದ್ ಎಂಬುವವರು ಈ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular