HomeInternationalಸಮುದ್ರ ದಂಡೆಯಲ್ಲಿ ಸಿಕ್ಕ ಬಾಟಲಿಯೊಳಗಿತ್ತು 34 ವರ್ಷಗಳ ಹಿಂದಿನ ಸಂದೇಶ....!

ಸಮುದ್ರ ದಂಡೆಯಲ್ಲಿ ಸಿಕ್ಕ ಬಾಟಲಿಯೊಳಗಿತ್ತು 34 ವರ್ಷಗಳ ಹಿಂದಿನ ಸಂದೇಶ….!

ಸುಮಾರು 34 ವರ್ಷಗಳ ಹಿಂದೆ ಸಂದೇಶವೊಂದನ್ನು ಬರೆದು ಅದನ್ನು ಬಾಟಲಿಯಲ್ಲಿ ಹಾಕಿ ಸಮುದ್ರದಲ್ಲಿ ಎಸೆದ ಬಾಟಲಿಯು ನ್ಯೂಫೌಂಡ್‌ಲ್ಯಾಂಡ್ ದೇಶದ ಮಹಿಳೆಯೊಬ್ಬರಿಗೆ ಸಿಕ್ಕಿದೆ. ಈ ಕುರಿತು ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಡಲತೀರದಲ್ಲಿ ಸಿಕ್ಕ ಬಾಟಲಿಯ ಚಿತ್ರವನ್ನು ಹಂಚಿಕೊಂಡಿರುವ ಅವರು, ಪ್ಲಾಸ್ಟಿಕ್ ಬಾಟಲಿಯನ್ನು ನಾನು ಕಂಡುಕೊಂಡಿದ್ದೇನೆ. ಇದರ ಒಳಗೆ ಸಂದೇಶವಿದ್ದು, ಅದು 34 ವರ್ಷಗಳ ಹಿಂದಿನದ್ದು ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೋರ್ಟ್ ಔ ಚಾಯಿಕ್ಸ್‌ನಲ್ಲಿರುವ ಫಾಕ್ಸ್ ಪಾಯಿಂಟ್‌ನಿಂದ 10 ಮೈಲಿ ದೂರದಲ್ಲಿರುವ ನೀರಿನಲ್ಲಿ ಈ ಬಾಟಲಿಯನ್ನು ಬಿಸಾಕಲಾಗಿತ್ತು. ಮೇ 29, 1989 ರಂದು ಬರೆದ ಸಂದೇಶವೊಂದು ಅದರಲ್ಲಿ ಇತ್ತು. ಅದು ಹಾಗೆಯೇ ಅಳಿಸದೇ ಉಳಿದಿರುವುದಾಗಿ ಮಹಿಳೆ ಹೇಳಿದ್ದಾರೆ.

ಬಾಟಲಿಯಲ್ಲಿರುವ ಸಂದೇಶದ ಬಗ್ಗೆ ಹೇಳಿದ ಅವರು, ಇದು ಗಾಳಿಯಿಲ್ಲದ ಬಿಸಿಲಿನ ದಿನವಾಗಿದೆ. ಈ ದಿನದಲ್ಲಿ ನಿನ್ನ ನೆನಪಾಗುತ್ತಿದ್ದು, ನಾನು ಪ್ರೀತಿಸುತ್ತೇನೆ ಎಂದು ಬರೆಯಲಾಗಿದೆ ಎಂದಿದ್ದಾರೆ. ಸಮುದ್ರದೊಳಗೆ ಅವಿತಿರುವ ಹೊಸ ಹೊಸ ವಿಷಯಗಳನ್ನು ಆವಿಷ್ಕಾರವನ್ನು ಮಾಡುವುದು ಎಂದರೆ ನನಗೆ ತುಂಬಾಖುಷಿಯಾಗಿದ್ದು, ಇದು ನನ್ನ ಬದುಕಿನ ರೋಚಕ ಘಟನೆ ಎಂದಿದ್ದಾರೆ.

 

 

For Latest News Updates, Join Our Whatsapp Community🚩
RELATED ARTICLES

Most Popular