HomeBeautyಈ ಮಾದಕ ಪಾನೀಯ ಸೌಂದರ್ಯ ವರ್ಧಕವೆಂದ್ರೆ ನೀವು ನಂಬ್ತೀರಾ....!

ಈ ಮಾದಕ ಪಾನೀಯ ಸೌಂದರ್ಯ ವರ್ಧಕವೆಂದ್ರೆ ನೀವು ನಂಬ್ತೀರಾ….!

ಬಿಯರ್​​ ಎಂಬ ಮಾದಕ ಪಾನೀಯದಿಂದ ನಿಮ್ಮ ಸೌಂದರ್ಯ ಇನ್ನಷ್ಟು ವೃದ್ಧಿಸುತ್ತೆ ಅಂದ್ರೆ ನೀವು ನಂಬ್ತಿರಾ? ಯಸ್, ಬಿಯರ್ ಕೇವಲ ಮಾದಕ ಪಾನೀಯ ಅಷ್ಟೇ ಅಲ್ಲ ಇದೊಂದು ಸೌಂದರ್ಯ ವರ್ಧಕ ಕೂಡ ಹೌದು.

ಮುಖದ ಮೇಲಿರುವ ಮೊಡವೆ, ಕಲೆ, ಕಪ್ಪು ರಂಧ್ರಗಳು, ಒರಟು ಚರ್ಮಕ್ಕೆ ಬಿಯರ್ ಮದ್ದು. ಫೇಸ್ ವಾಶ್ ರೀತಿ ಬಿಯರ್ ಬಳಸಿದ್ರೆ ಈ ಎಲ್ಲ ಸಮಸ್ಯೆ ದೂರವಾಗುತ್ತದೆ. ಒಂದೇ ವಾರದಲ್ಲಿ ತ್ವಚೆ ಮೃದುವಾಗುವುದಲ್ಲದೆ, ಮುಖದ ಮೇಲಿರುವ ಕಲೆಗಳು ಮಾಯವಾಗುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಯರ್​​ನಲ್ಲಿ ಇರುವ ಆಲ್ಕೊಹಾಲ್ ​​ನ ಅಂಶ ತ್ವಚೆಯ ಚರ್ಮದ ರಂಧ್ರದೊಳಗಿರುವ ಕಲ್ಮಶಗಳನ್ನ ತೆಗೆದುಹಾಕಲು ಸಹಕಾರಿ. ಇದೇ ಕಾರಣಕ್ಕೆ ಮುಖ ಫ್ರೆಶ್​​ ಆಗಿರುತ್ತೆ. ಅಷ್ಟೇ ಅಲ್ಲ, ಮುಖದಲ್ಲಿ ಇನ್ನೂ ಹೆಚ್ಚಿನ ಗ್ಲೋ ಕಾಣಬೇಕೆಂದರೆ ಬಿಯರ್​ ಗೆ ನಿಂಬೆ ಹಣ್ಣಿನ ರಸವನ್ನ ಬೆರೆಸಿ ಮುಖವನ್ನ ತೊಳೆದುಕೊಳ್ಳಿ. ಆದರೆ ಈ ಬಿಯರ್​ನಿಂದ ಮುಖ ತೊಳೆದುಕೊಂಡ ನಂತರ ಯಾವುದೇ ಕಾರಣಕ್ಕೂ ಯಾವುದೇ ಕ್ರೀಂ ಹಚ್ಚಬೇಡಿ.

For Latest News Updates, Join Our Whatsapp Community🚩
RELATED ARTICLES

Most Popular