HomeLatest Newsಇಷ್ಟೊಂದು ಮೋಸ ಮಾಡ್ತಾರಾ ? ‘ಧುರಂಧರ್ 2’ ಟೀಸರ್ ನೋಡಿ ರೊಚ್ಚಿಗೆದ್ದ ಫ್ಯಾನ್ಸ್.!

ಇಷ್ಟೊಂದು ಮೋಸ ಮಾಡ್ತಾರಾ ? ‘ಧುರಂಧರ್ 2’ ಟೀಸರ್ ನೋಡಿ ರೊಚ್ಚಿಗೆದ್ದ ಫ್ಯಾನ್ಸ್.!

ಬಾಲಿವುಡ್ ನಟ ರಣವೀರ್ ಸಿಂಗ್ ನಾಯಕರಾಗಿ, ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಧುರಂಧರ್ 2’ ಚಿತ್ರದ ಟೀಸರ್ ನಿನ್ನೆ ಬಿಡುಗಡೆಯಾಗಿದೆ. ಈ ಟೀಸರ್ ಬಗ್ಗೆ ಪ್ರೇಕ್ಷಕರಲ್ಲಿ ಭಾರಿ ಕುತೂಹಲವಿತ್ತು. ಕಳೆದ ಕೆಲವು ದಿನಗಳಿಂದ ಅಭಿಮಾನಿಗಳು ಇದಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ, ಟೀಸರ್ ಬಿಡುಗಡೆಯಾದ ನಂತರ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ.

ಹೌದು, ಟೀಸರ್ ನಲ್ಲಿ ಹೊಸ ದೃಶ್ಯಗಳಿಲ್ಲದಿರುವುದೇ ಅಭಿಮಾನಿಗಳ ಸಿಟ್ಟಿಗೆ ಮುಖ್ಯ ಕಾರಣ. ಇದರಲ್ಲಿ ತೋರಿಸಲಾದ ಎಲ್ಲಾ ದೃಶ್ಯಗಳು ಈಗಾಗಲೇ ‘ಧುರಂಧರ್’ ಭಾಗ-1ರ ಕ್ಲೈಮ್ಯಾಕ್ಸ್ ನಂತರ ತೋರಿಸಲಾದ ದೃಶ್ಯಗಳೇ ಆಗಿವೆ. ಹೊಸ ಸಿನಿಮಾ ಎಂದು ಹೇಳಿ ಹಳೆಯ ದೃಶ್ಯಗಳನ್ನೇ ಮರುಬಳಕೆ ಮಾಡಿರುವುದಕ್ಕೆ ಫ್ಯಾನ್ಸ್ ಕಿಡಿಕಾರಿದ್ದಾರೆ.

ಟೀಸರ್ ನಲ್ಲಿ ಹೊಸ ಸೀನ್ಗಳಿಗಿಂತ ಮೊದಲ ಭಾಗದ ಕ್ಲಿಪ್ಗಳೇ ಹೆಚ್ಚಿವೆ ಎಂಬುದು ಪ್ರೇಕ್ಷಕರ ಮುಖ್ಯ ದೂರು. “ನಮಗೆ ಹೊಸತೇನಾದರೂ ತೋರಿಸಿ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.ಅಸಮಾಧಾನವಿದ್ದರೂ ರಣ್ವೀರ್ ಸಿಂಗ್ ಅವರ ಗೂಢಚಾರಿ ಲುಕ್ ಮತ್ತು ಅವರು ಹೇಳುವ ಪವರ್ಫುಲ್ ಡೈಲಾಗ್ಗಳು ವೈರಲ್ ಆಗುತ್ತಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹೇಳಿದ್ದೇನು..?
• “ಇದರಲ್ಲಿ ಹೊಸದೇನೂ ಇಲ್ಲ, ನಾವೆಲ್ಲಾ ಇದನ್ನು ಈಗಾಗಲೇ ನೋಡಿದ್ದೇವೆ” ಎಂದು ಒಬ್ಬರು ಬರೆದರೆ;
• “ಮೊದಲ ಭಾಗದ ಕೊನೆಯಲ್ಲಿ ಇದೇ ಟೀಸರ್ ನೋಡಿದ್ದೆವು” ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
• “ಏನಾದರೂ ಹೊಸದನ್ನು ನೋಡಬಹುದು ಅಂದುಕೊಂಡಿದ್ದೆವು, ಈಗ ತಕ್ಷಣವೇ ಟ್ರೈಲರ್ ಬಿಡುಗಡೆ ಮಾಡಿ” ಎಂದು ಇನ್ನೊಬ್ಬರು ಒತ್ತಾಯಿಸಿದ್ದಾರೆ.

ಆಕರ್ಷಕವಾಗಿ ಮೂಡಿಬಂದ ರಣ್ವೀರ್ ಲುಕ್
ಟೀಸರ್ ಬಗ್ಗೆ ಅಸಮಾಧಾನವಿದ್ದರೂ, ರಣ್ವೀರ್ ಸಿಂಗ್ ಅವರ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ರೆಹಮಾನ್ ಡಕೈಟ್ ಮರಣದ ನಂತರ ಹಂಜಾ ಲ್ಯಾರಿಯನ್ನು ಹೇಗೆ ಆಳಿದ ಎಂಬ ಕಥೆಯನ್ನು ಇಲ್ಲಿ ತೋರಿಸಲಾಗಿದೆ. “ಯೇ ನಯಾ ಹಿಂದೂಸ್ತಾನ್ ಹೈ, ಘರ್ ಮೇ ಘುಸೇಗಾ ಭೀ ಔರ್ ಮಾರೇಗಾ ಭೀ..” ಎಂದು ರಣ್ವೀರ್ ಹೇಳುವ ಡೈಲಾಗ್ ಟೀಸರ್ನ ಹೈಲೈಟ್ ಆಗಿದೆ.ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣ್ವೀರ್ ಸಿಂಗ್ ಹಂಜಾ ಅಲಿ ಮಜಾರಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಪಾಕಿಸ್ತಾನದ ಲ್ಯಾರಿ ನಗರದ ಭಯೋತ್ಪಾದಕ ಸಂಘಟನೆಯೊಳಗೆ ಗೂಢಚಾರಿಯಾಗಿ ನುಗ್ಗುವ ಪಾತ್ರ ಇದಾಗಿದೆ.

ಮೊದಲ ಭಾಗದಲ್ಲಿ ಅಕ್ಷಯ್ ಖನ್ನಾ ಅಭಿನಯಿಸಿದ್ದ ರೆಹಮಾನ್ ಡಕೈಟ್ ಪಾತ್ರ ಸಾವನ್ನಪ್ಪುತ್ತದೆ. ಆದರೆ ಆ ಪಾತ್ರಕ್ಕಿರುವ ಜನಪ್ರಿಯತೆಯಿಂದಾಗಿ, ಸೀಕ್ವೆಲ್ನಲ್ಲಿ ರೆಹಮಾನ್ ಪಾತ್ರವನ್ನು ಮತ್ತೆ ಬದುಕಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ಬಿಡುಗಡೆಯಾದ ಮೇಲೆಯೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.

ಆದಿತ್ಯ ಧರ್ ಮ್ಯಾಜಿಕ್: ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಖ್ಯಾತಿಯ ಆದಿತ್ಯ ಧರ್ ನಿರ್ದೇಶನವಿರುವುದರಿಂದ ಈ ಸಿನಿಮಾ ಕೂಡ ದೇಶಭಕ್ತಿ ಮತ್ತು ಆಕ್ಷನ್ನಿಂದ ಕೂಡಿರಲಿದೆ ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಅವರಂತಹ ಘಟಾನುಘಟಿ ನಟರು ಒಂದೇ ಪರದೆಯ ಮೇಲೆ ಬರುವುದು ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular