HomeLatest News20 ಸಚಿವರ ಡಿಕೆಶಿ ಸಂಪುಟ: ಯಾವ ಸಮುದಾಯಕ್ಕೆ ಎಷ್ಟು ಪ್ರಾತಿನಿಧ್ಯ?

20 ಸಚಿವರ ಡಿಕೆಶಿ ಸಂಪುಟ: ಯಾವ ಸಮುದಾಯಕ್ಕೆ ಎಷ್ಟು ಪ್ರಾತಿನಿಧ್ಯ?

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೊಸದಾಗಿ 19 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದ ಗ್ಲಾಸ್ ಹೌಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಈ ಮೂಲಕ ಮುಖ್ಯಮಂತ್ರಿ ಸೇರಿ ಸಂಪುಟದ ಒಟ್ಟು ಸದಸ್ಯರ ಸಂಖ್ಯೆ ಗರಿಷ್ಠ ಮಿತಿ 33ಕ್ಕೆ ತಲುಪಿದೆ. ಪ್ರಾದೇಶಿಕ ಸಮತೋಲನ ಹಾಗೂ ಜಾತಿವಾರು ಸಮೀಕರಣವನ್ನು ಗಮನದಲ್ಲಿಟ್ಟುಕೊಂಡು ಹೊಸ ಸಂಪುಟವನ್ನು ರಚಿಸಲಾಗಿದೆ. ನೂತನ ಸಂಪುಟದ ಜಾತಿ ಪ್ರಾತಿನಿಧ್ಯದ ವಿವರ ಇಲ್ಲಿದೆ.

ಸಂಪುಟದಲ್ಲಿ ಲಿಂಗಾಯತ ಹಾಗೂ ಪರಿಶಿಷ್ಟ ಜಾತಿ ಸಮುದಾಯಕ್ಕೆ ತಲಾ 7 ಸ್ಥಾನ ಸಿಕ್ಕಿದ್ದರೆ, ಒಕ್ಕಲಿಗ ಮತ್ತು ಹಿಂದುಳಿದ ವರ್ಗಕ್ಕೆ ತಲಾ 5 ಹಾಗೂ 7 ಸ್ಥಾನ ನೀಡಲಾಗಿದೆ. ಉಳಿದಂತೆ ಅಲ್ಪಸಂಖ್ಯಾತರಿಗೆ 4, ಪರಿಶಿಷ್ಟ ಪಂಗಡಕ್ಕೆ 3 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾತಿವಾರು ಸಚಿವರ ವಿವರ

ಲಿಂಗಾಯತ ಸಮುದಾಯ

ಎಂ. ಬಿ. ಪಾಟೀಲ್

ಈಶ್ವರ್ ಖಂಡ್ರೆ

ಬಸವರಾಜ್ ರಾಯರೆಡ್ಡಿ

ವಿಜಯಾನಂದ ಕಾಶಪ್ಪನವರ

ಲಕ್ಷ್ಮಣ ಸವದಿ

ಡಾ. ಶರಣ ಪ್ರಕಾಶ್ ಪಾಟೀಲ್

ಎಸ್. ಎಸ್. ಮಲ್ಲಿಕಾರ್ಜುನ

ಒಕ್ಕಲಿಗ ಸಮುದಾಯ

ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿ)

ಕೃಷ್ಣ ಬೈರೇಗೌಡ

ಎನ್. ಚೆಲುವರಾಯಸ್ವಾಮಿ

ಎಚ್. ಸಿ. ಬಾಲಕೃಷ್ಣ

ಕೆ. ಎಂ. ಶಿವಲಿಂಗೇಗೌಡ

ಪರಿಶಿಷ್ಟ ಜಾತಿ (SC)

ಡಾ. ಜಿ. ಪರಮೇಶ್ವರ (ಬಲಗೈ)

ಪಿ. ಎಂ. ನರೇಂದ್ರಸ್ವಾಮಿ (ಬಲಗೈ)

ಪ್ರಿಯಾಂಕ್ ಖರ್ಗೆ (ಬಲಗೈ)

ಕೆ. ಎಚ್. ಮುನಿಯಪ್ಪ (ಎಡಗೈ)

ಕೆ. ಎಸ್. ಬಸವಂತಪ್ಪ (ಎಡಗೈ)

ರುದ್ರಪ್ಪ ಲಮಾಣಿ (ಲಂಬಾಣಿ)

ಶಿವರಾಜ್ ಎಸ್. ತಂಗಡಗಿ (ಬೋವಿ)

ಪರಿಶಿಷ್ಟ ಪಂಗಡ (ST)

ಸತೀಶ್ ಜಾರಕಿಹೊಳಿ (ವಾಲ್ಮೀಕಿ)

ಟಿ. ರಘುಮೂರ್ತಿ (ವಾಲ್ಮೀಕಿ)

ಬಿ. ನಾಗೇಂದ್ರ (ವಾಲ್ಮೀಕಿ)

ಅಲ್ಪಸಂಖ್ಯಾತ ಸಮುದಾಯ

ಯು. ಟಿ. ಖಾದರ್ (ಮುಸ್ಲಿಂ)

ಬಿ.ಝಡ್. ಜಮೀರ್ ಅಹಮದ್ ಖಾನ್ (ಮುಸ್ಲಿಂ)

ರಿಜ್ವಾನ್ ಅರ್ಷದ್ (ಮುಸ್ಲಿಂ)

ಕೆ. ಜೆ. ಜಾರ್ಜ್ (ಕ್ರಿಶ್ಚಿಯನ್)

ಇತರ ಹಿಂದುಳಿದ ವರ್ಗಗಳು (OBC)

ಡಾ. ಯತೀಂದ್ರ ಸಿದ್ದರಾಮಯ್ಯ (ಕುರುಬ)

ಬಿ. ಭೈರತಿ ಸುರೇಶ್ (ಕುರುಬ)

ಪುಟ್ಟರಂಗ ಶೆಟ್ಟಿ (ಉಪ್ಪಾರ)

ಎಸ್. ಮಧು ಬಂಗಾರಪ್ಪ (ಈಡಿಗ)

ಸಂತೋಷ ಲಾಡ್ (ಮರಾಠ)

ಡಾ. ಅಜಯ್ ಸಿಂಗ್ (ರಜಪೂತ್)

ರಾಮಲಿಂಗಾರೆಡ್ಡಿ (ರೆಡ್ಡಿ)

ಬ್ರಾಹ್ಮಣ ಸಮುದಾಯಕ್ಕೆ ತಪ್ಪಿದ ಅವಕಾಶ

ಹೊಸ ಸಂಪುಟ ವಿಸ್ತರಣೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಸ್ಥಾನ ಸಿಕ್ಕಿಲ್ಲ. ಈ ಹಿಂದಿನ ಸಂಪುಟದಲ್ಲಿದ್ದ ದಿನೇಶ್ ಗುಂಡೂರಾವ್ ಅವರನ್ನು ಈ ಬಾರಿಯ ವಿಸ್ತರಣೆ ವೇಳೆ ಕೈಬಿಡಲಾಗಿದೆ. ದಿನೇಶ್ ಗುಂಡೂರಾವ್ ಅಥವಾ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತಾದರೂ, ಅಂತಿಮವಾಗಿ ಯಾರಿಗೂ ಸ್ಥಾನ ಸಿಗದಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular