HomeKarnatakaBIG NEWS: ಕಾಂಗ್ರೆಸ್ ಪಕ್ಷ ಕಮ್ಯೂನಲ್ ಮತ್ತು ಕ್ರಿಮಿನಲ್ ಪಕ್ಷ; ಸಿ.ಟಿ.ರವಿ ವಾಗ್ದಾಳಿ

BIG NEWS: ಕಾಂಗ್ರೆಸ್ ಪಕ್ಷ ಕಮ್ಯೂನಲ್ ಮತ್ತು ಕ್ರಿಮಿನಲ್ ಪಕ್ಷ; ಸಿ.ಟಿ.ರವಿ ವಾಗ್ದಾಳಿ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ಮೋಸ್ಟ್ ಕಮ್ಯೂನಲ್ ಮತ್ತು ಕ್ರಿಮಿನಲ್ ಪಕ್ಷವಾಗಿದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ಪಕ್ಷದವರು ನಿಜವಾಗಿಯೂ ಜಾತ್ಯಾತೀತರಾಗಿದ್ದರೆ ದೇವಾಲಯದ ಹುಂಡಿಗೆ ಮಾತ್ರ ಕೈಹಾಕುತ್ತಿರಲಿಲ್ಲ. ಮಸೀದಿ, ಚರ್ಚ್ ಹುಂಡಿಗೂ ಕೈಹಾಕುತ್ತಿದ್ದರು ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ನವರು ತಮ್ಮ ಹೆಸರಿನಲ್ಲಿ ರಾಮ-ಕೃಷ್ಣ-ಶಿವ ಇದ್ದಾನೆ ಎಂದು ಹೇಳುತ್ತಾರೆ. ಹೆಸರಲ್ಲಿ ದೇವರಿದ್ದರೆ ಭಕ್ತರ ಹುಂಡಿಗೆ ಕೈಹಾಕುತ್ತಿರಲಿಲ್ಲ. ಆದರೆ ಇವರು ದೇವರ ಹುಂಡಿಗೂ ಕೈಹಾಕುತ್ತಿದ್ದಾರೆ. ಜಾತ್ಯಾತೀತತೆ ಎಂದರೆ ದೇವಸ್ಥಾನದ ಹುಂಡಿಗೆ ಕೈ ಹಾಕುವುದಾ? ಕಾಂಗ್ರೆಸ್ ಪಕ್ಷ ಕಮ್ಯೂನಲ್ ಹಾಗೂ ಕ್ರಿಮಿನಲ್ ಪಾರ್ಟಿ ಎಂದು ಗುಡುಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ನವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಗೊತ್ತಾಗಿದೆ. ಸೋಲುವುದಕ್ಕೆ ಯಾಕೆ ಸ್ಪರ್ಧೆ ಮಾಡ್ತಾರೆ? ಎಂದು ವ್ಯಂಗ್ಯವಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular