HomeKarnatakaBIG NEWS: ಗೆದ್ದರೆ ಧೀಮಂತ ನಾಯಕ 'ರಾಜಾಹುಲಿ ಶ್ರಮ’ ಅನ್ನೋದು; ಸೋತರೆ ಎಲ್ಲರೂ ಹೊಣೆ ಅನ್ನೋದು...

BIG NEWS: ಗೆದ್ದರೆ ಧೀಮಂತ ನಾಯಕ ‘ರಾಜಾಹುಲಿ ಶ್ರಮ’ ಅನ್ನೋದು; ಸೋತರೆ ಎಲ್ಲರೂ ಹೊಣೆ ಅನ್ನೋದು ಯಾಕೆ? BSY ವಿರುದ್ಧ ಯತ್ನಾಳ್ ವಾಗ್ದಾಳಿ

ಕಲಬುರಗಿ: ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸೋಲಿಗೆ ಎಲ್ಲರೂ ಹೊಣೆ ಹೋರಬೇಕು ಎಂದಿದ್ದರು. ಯಡಿಯೂರಪ್ಪ ಹೇಳಿಕೆಗೆ ಗರಂ ಆಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸೋಲಿನ ಹೊಣೆಯನ್ನು ನೀವೇ ಹೊರಬೇಕು ಎಂದಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಗೆದ್ದರೆ ಧೀಮಂತನಾಯಕ ರಾಜಾಹುಲಿ ಶ್ರಮ ಅನ್ನೋದು, ಸೋತರೆ ಎಲ್ಲರೂ ಹೊಣೆ ಅನ್ನೋದು ಯಾಕೆ? ಗೆದ್ದಾಗ ಯಾವತ್ತಾದರೂ ಯತ್ನಾಳ್ ಎಂದಿದ್ದೀರಾ? ಈಗ ಸೋಲಿನ ಹೊಣೆಯನ್ನೂ ನೀವೆ ತೆಗೆದುಕೊಳ್ಳಿ ಎಂದು ಗುಡುಗಿದ್ದಾರೆ.

ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನಡೆ ಬಗ್ಗೆ ಈ ಹಿಂದೆಯೇ ಪ್ರತಿಕ್ರಿಯಿಸಿದ್ದ ಯತ್ನಾಳ್, ಈ ಸೋಲಿಗೆ ಪೂಜ್ಯ ತಂದೆ ಹಗೂ ಕಿರಿಯ ಮಗನೇ ಕಾರಣ ಎನ್ನುವ ಮೂಲಕ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಸೋಲಿನ ಹೊಣೆಯನ್ನು ಎಲ್ಲರ ಮೇಲೆ ಹಾಕುವ ಬದಲು ನೀವೆ ಹೊರಬೇಕು ಎನ್ನುವ ಮೂಲಕ ಮತ್ತೆ ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular