HomeKarnatakaಮಹತ್ವದ ತಿರುವು ಪಡೆದ ಉದ್ಯಮಿ ಕೆ. ರಘುನಾಥ್ ಸಾವಿನ ಪ್ರಕರಣ: ಉದ್ಯಮಿ ಡಿ.ಕೆ. ಆದಿಕೇಶವಲು ಪುತ್ರ,...

ಮಹತ್ವದ ತಿರುವು ಪಡೆದ ಉದ್ಯಮಿ ಕೆ. ರಘುನಾಥ್ ಸಾವಿನ ಪ್ರಕರಣ: ಉದ್ಯಮಿ ಡಿ.ಕೆ. ಆದಿಕೇಶವಲು ಪುತ್ರ, ಪುತ್ರಿ, DYSP ಅರೆಸ್ಟ್

ಬೆಂಗಳೂರು: ಉದ್ಯಮಿ ಕೆ. ರಘುನಾಥ್ ಅನುಮಾನಾಸ್ಪದ ಸಾವಿನ ಪ್ರಕರಣ 7 ವರ್ಷದ ನಂತರ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ತನಿಖೆ ಚುರುಕುಗೊಳಿಸಿದ ಸಿಬಿಐ ಅಧಿಕಾರಿಗಳು ದಿ. ಮಾಜಿ ಸಂಸದ ಡಿ.ಕೆ. ಆದಿಕೇಶವಲು ನಾಯ್ಡು ಅವರ ಪುತ್ರ, ಪುತ್ರಿ ಮತ್ತು ಡಿವೈಎಸ್ಪಿ ಯನ್ನು ಬಂಧಿಸಿದ್ದಾರೆ.

 ಡಿ.ಕೆ. ಆದಿಕೇಶವಲು ಅವರ ಪುತ್ರ ಡಿ.ಎ. ಶ್ರೀನಿವಾಸ್, ಪುತ್ರಿ ಡಿ,ಎ, ಕಲ್ಪಜಾ ಮತ್ತು ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಎಸ್.ವೈ. ಮೋಹನ್ ಅವರನ್ನು ಡಿಸೆಂಬರ್ 29ರವರೆಗೆ ಸಿಬಿಐ ಕಸ್ಟಡಿಗೆ ನೀಡಿ 48ನೇ ಎಸಿಎಂಎಂ ಕೋರ್ಟ್ ಸೋಮವಾರ ಆದೇಶಿಸಿದೆ.

ರಾಜ್ಯಸಭಾ ಸದಸ್ಯರಾಗಿದ್ದ ಆದಿಧಿಕೇಶವಲು ನಾಯ್ಡು ಅವರ ಆಪ್ತರಾಗಿದ್ದ ಕೆ. ರಘುನಾಥ್ ಅವರ ಮೃತ ದೇಹ 2019ರ ಮೇ 4ರಂದು ಅತಿಥಿಗೃಹವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರಘುನಾಥ್ ಅವರದು ಆತ್ಮಹತ್ಯೆಯಲ್ಲ, ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಬರೆಸಿಕೊಂಡು ಶ್ರೀನಿವಾಸ್ ಸೇರಿದಂತೆ ಇತರರು ಕೊಲೆ ಮಾಡಿ ಆತ್ಮಹತ್ಯೆ ಎನ್ನುವಂತೆ ಬಿಂಬಿಸಿದ್ದಾರೆ ಎಂದು ರಘುನಾಥ್ ಪತ್ನಿ ಮಂಜುಳಾ ಆರೋಪಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಎಎಲ್ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಎಸ್.ವೈ. ಮೋಹನ್ ಪ್ರಕರಣದ ತನಿಖೆ ನಡೆಸಿದ್ದರು. ಪ್ರಕರಣದ ಗಂಭೀರತೆ ಅರಿತ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿತ್ತು. ರಘುನಾಥ್ ಸಾವಿನಲ್ಲಿ ಆರೋಪಿಗಳ ಪಾತ್ರವಿಲ್ಲ ಎಂದು ಎಸ್ಐಟಿ ಹೇಳಿತ್ತು.

ರಾಜ್ಯ ಪೊಲೀಸರ ತನಿಖೆಯನ್ನು ಒಪ್ಪದ ರಘುನಾಥ್ ಪುತ್ರ ರೋಹಿತ್ ತಮ್ಮ ತಂದೆ ಸಾವಿನ ಸಂಬಂಧ ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಪೊಲೀಸರ ತನಿಖಾ ವೈಫಲ್ಯದ ಬಗ್ಗೆ ಬೊಟ್ಟು ಮಾಡಿದ್ದ ಹೈಕೋರ್ಟ್ ರಘುನಾಥ್ ಸಾವಿನ ಕುರಿತು ತನಿಖೆ ನಡೆಸುವಂತೆ 2022ರ ಸೆಪ್ಟೆಂಬರ್ ನಲ್ಲಿ ಸಿಬಿಐಗೆ ಆದೇಶಿಸಿತ್ತು.

ಸಿಬಿಐ ಅಧಿಕಾರಿಗಳು ಕೊಲೆ, ಸಾಕ್ಷ್ಯ ನಾಶ, ನಕಲಿ ದಾಖಲೆ ಸೃಷ್ಟಿ ಹಲವು ಆರೋಪಗಳ ಅನ್ವಯ ಶ್ರೀನಿವಾಸ್ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

ರಾಜ್ಯಸಭಾ ಸದಸ್ಯರಾಗಿದ್ದ ಅಧಿಕೇಶವಲು ನಾಯ್ಡು ಅವರ ಅತ್ಯಂತ ಆಪ್ತರಾಗಿ ಕೆ. ರಘುನಾಥ್ ಗುರುತಿಸಿಕೊಂಡಿದ್ದರು. ಕೆಲವು ಸ್ಥಿರಾಸ್ತಿಗಳನ್ನು ರಘುನಾಥ್ ಹೆಸರಿನಲ್ಲಿ ಮಾಡಿಡಲಾಗಿತ್ತು. 2013ರಲ್ಲಿ ಆದಿಕೇಶವಲು ನಾಯ್ಡು ಮೃತಪಟ್ಟಿದ್ದರು. ಆಸ್ತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ಶ್ರೀನಿವಾಸ್ ಮತ್ತು ಕಲ್ಪಜಾ ನಿರಂತರವಾಗಿ ರಘುನಾಥ್ ಗೆ ಬೆರೆದರಿಕೆ ಹಾಕುತ್ತಿದ್ದರು. 2019ರ ಮೇ 2ರಂದು ರಘುನಾಥ್ ಅವರನ್ನು ಅಪಹರಿಸಿ ಕೂಡಿಹಾಕಿ ಕೆಲವು ಆಸ್ತಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ನಕಲಿ ಛಾಪಾ ಕಾಗದ ಸೃಷ್ಟಿಸಿದ್ದಾರೆ ಎಂದು ಮಂಜುಳಾ ಆರೋಪಿಸಿ ದೂರು ನೀಡಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular