HomeKarnatakaBIG NEWS: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಉದ್ಯಮಿಗೆ ಯುವತಿಯಿಂದ ಹನಿಟ್ರ್ಯಾಪ್: 40 ಲಕ್ಷ ದೋಚಿದ...

BIG NEWS: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಉದ್ಯಮಿಗೆ ಯುವತಿಯಿಂದ ಹನಿಟ್ರ್ಯಾಪ್: 40 ಲಕ್ಷ ದೋಚಿದ ಗ್ಯಾಂಗ್

ಬೆಂಗಳೂರು: ಸಿನಿಮಾ ಆಸೆ ತೋರಿಸಿ, ಅವಕಾಶ ನೀಡುವುದಾಗಿ ಹೇಳಿ ಯುವತಿಯೊಬ್ಬಳು ಉದ್ಯಮಿಗೆ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ 40 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಸಿನಿಮಾ ಹೆಸರಲ್ಲಿ ಸುಂದರಿಯೊಬ್ಬಳು ಬ್ಯುಸಿನೆಸ್ ಮ್ಯಾನ್ ಓರ್ವರಿಗೆ ಹನಿಟ್ರ್ಯಾಪ್ ಮಾಡಿ 40 ಲಕ್ಷ ರೂಪಾಯಿ ದೋಚಿದ್ದಾಳೆ. ಆರಂಭದಲ್ಲಿ ಸಿನಿಮಾ ಮಾಡೊಣ. ನಾನೂ ಕೂಡ ಅದೇ ಫೀಲ್ಡ್ ನಲ್ಲಿದ್ದೇನೆ ಎಂದು ಉದ್ಯಮಿಯ ಪರಿಚಯ ಮಾಡಿಕೊಂಡಿದ್ದ ಕಾವ್ಯಾ ಎಂಬ ಯುವತಿ, ಕೆಲ ದಿನಗಳ ನಂತರ ನಾನು ಡೈರೆಕ್ಟರ್ ಎಂದು ಹೇಳಿ ಹಣದ ಬೇಡಿಕೆ ಇಟ್ಟಿದ್ದಾಳೆ.

ಕಷ್ಟ ಇದೆ ಎಂದು ಹೇಳಿ ಉದ್ಯಮಿಯಿಂದ ಮೊದಲು 4 ಲಕ್ಷ ರೂಪಾಯಿ ಪಡೆದುಕೊಂಡಿದ್ದ ಯುವತಿ, ನಂತರ ಹಣ ವಾಪಾಸ್ ಕೇಳಿದಾಗ ತನ್ನ ರೂಮಿಗೆ ಕರೆದು ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಬಳಿಕ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಆರಂಭಿಸಿದ್ದು, ಬ್ರೆಸ್ ಲೈಟ್, ಚೈನ್ ಎಂದು 40 ಲಕ್ಷ ರೂಪಾಯಿ ಪಡೆದುಕೊಂಡಿದ್ದಾಳೆ. ಅಲ್ಲದೇ ರವಿ, ದಿಲೀಪ್ ಎಂಬುವವರಿಂದ ಕರೆ ಮಾಡಿಸಿ ಧಮ್ಕಿ ಹಾಕಿದ್ದಾಳೆ. ಹಣ ಕೊಡದಿದ್ದರೆ ವಿಡಿಯೋ ಟಿವಿಯವರಿಗೆ ಕೊಡುವುದಾಗಿ ಬೆದರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಂಚನೆಗೊಳಗಾದ ಉದ್ಯಮಿ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಯುವತಿ ಕಾವ್ಯಾ, ರವಿ, ದಿಲೀಪ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular