ಈಗಿನ ದಿನಗಳಲ್ಲಿ ಹೃದಯಾಘಾತದ ಸಂಖ್ಯೆ ಹೆಚ್ಚಾಗ್ತಿದೆ. ಊಟ ಮಾಡುವಾಗ, ಕೆಲಸ ಮಾಡುವಾಗ, ಜಿಮ್ ನಲ್ಲಿ ಹೀಗೆ ನಾನಾ ಸ್ಥಳಗಳಲ್ಲಿ ಜನರು ಹೃದಯಾಘಾತಕ್ಕೊಳಗಾಗ್ತಿದ್ದಾರೆ. ಈಗ ಮತ್ತೊಂದು ವೈರಲ್ ವಿಡಿಯೋ ಎದೆ ಬಡಿತವನ್ನು ಹೆಚ್ಚು ಮಾಡಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಜಿಮ್‌ನಲ್ಲಿ ಜುಂಬಾ ಡ್ಯಾನ್ಸ್ ವರ್ಕೌಟ್ ಮಾಡುತ್ತಿದ್ದ ವೇಳೆ ಉದ್ಯಮಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಮೃತರನ್ನು ಸಿಮ್ರಾನ್ ಮೋಟಾರ್ ಮಾಲೀಕ ಕವಾಲ್ಜಿತ್ ಸಿಂಗ್ ಬಗ್ಗಾ ಎಂದು ಗುರುತಿಸಲಾಗಿದೆ. ಈ ಘಟನೆಯ ವಿಡಿಯೋದಲ್ಲಿ ಬಗ್ಗಾ ಜುಂಬಾ ಮಾಡ್ತಿರೋದನ್ನು ನೀವು ನೋಡ್ಬಹುದು. ನಂತ್ರ ಅವರು ಹಿಂದೆ ಸರಿದು, ಗೋಡೆಗೆ ವಾಲುತ್ತಾರೆ. ಕೆಲವೇ ಕ್ಷಣಗಳಲ್ಲಿ ನೆಲಕ್ಕೆ ಬೀಳ್ತಾರೆ. ಅವರಿಗೆ ಸಹಾಯ ಮಾಡಲು ಉಳಿದವರು ಮುಂದಾಗ್ತಾರೆ.
ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದ್ರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳಿವೆ. ಎಕ್ಸ್ ಖಾತೆಯಲ್ಲಿ ಇದ್ರ ವಿಡಿಯೋ ವೈರಲ್ ಆಗಿದೆ. ದಯವಿಟ್ಟು ಸಿಪಿಆರ್ ಇತ್ಯಾದಿಗಳ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕು. ಇದ್ರ ಬಗ್ಗೆ ತಿಳುವಳಿಕೆ ನೀಡುವ ಶಿಬಿರಗಳನ್ನು ಏರ್ಪಡಿಸಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
https://twitter.com/News18lokmat/status/1815028402253856840?ref_src=twsrc%5Etfw%7Ctwcamp%5Etweetembed%7Ctwterm%5E1815028402253856840%7Ctwgr%5E00d11f83659eeee0aa25efeda432f03ddd754cf3%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fsuddendeathinmaharashtrabusinessmancollapsesaftersufferingheartattackduringzumbadanceworkoutinchhatrapatisambhajinagardieswatchvideo-newsid-n623058788