ಬೆಂಗಳೂರು: ಟಿಕೆಟ್ ಖರೀದಿಸಲು ಚಿಲ್ಲರೆ ಇಲ್ಲದ ಕಾರಣಕ್ಕಾಗಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರನ್ನು ಬಸ್ ಬಿಎಂಟಿಸಿ ಬಸ್ ನಿಂದ ಕೆಳಗಿಳಿಸಿದ ಚಾಲಕ ಕಂ ನಿರ್ವಾಹಕನನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶಿಸಿದೆ.
ಟಿ.ಜಿ. ರಾಮಕೃಷ್ಣ ಅಮಾನತುಗೊಂಡವರು. ಕಳೆದ ಶನಿವಾರ ಬೈರತಿ ಸುರೇಶ್ ಅವರು ಬಿಎಂಟಿಸಿ ಸೇವೆ ಪರೀಕ್ಷಿಸಲು ರಿಯಾಲಿಟಿ ಚೆಕ್ ನಡೆಸಿದ್ದರು. ಈ ವೇಳೆ ಕೆಂಪೇಗೌಡ ಬಸ್ ನಿಲ್ದಾಣ -ನಾಗಶೆಟ್ಟಿಹಳ್ಳಿ ಮಾರ್ಗದ ಬಸ್ ನಲ್ಲಿ ಪ್ರಯಾಣಿಸುವಾಗ ಚಿಲ್ಲರೆ ನೀಡುವಂತೆ ನಿರ್ವಾಹಕರು ಬೈರತಿ ಸುರೇಶ್ ಅವರಿಗೆ ಕೇಳಿದ್ದಾರೆ.
ಆಗ ಬೈರತಿ ಸುರೇಶ್ ಚಿಲ್ಲರೆ ಇಲ್ಲ ಎಂದಾಗ ಅವರನ್ನು ಬಸ್ ನಿಂದ ಕೆಳಕ್ಕೆ ಇಳಿಸಿದ್ದರು. ಹೀಗೆ ಉದ್ಧಟತನ ತೋರಿದ ಚಾಲಕ ಕಂ ನಿರ್ವಾಹಕ ಟಿ.ಜಿ. ರಾಮಕೃಷ್ಣ ಅವರನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶಿಸಿದೆ.
ಚಿಲ್ಲರೆ ನೆಪದಲ್ಲಿ ಪ್ರಯಾಣಿಕರನ್ನು ಬಸ್ ನಿಂದ ಕೆಳಗೆ ಇಳಿಸಬಾರದು. ಚಿಲ್ಲರೆ ಇಲ್ಲದಿದ್ದರೆ ಯುಪಿಐ ಮೂಲಕ ಪ್ರಯಾಣ ದರ ಪಾವತಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

