ಕದ್ದ ಹಣದಲ್ಲಿ ದೇವಸ್ಥಾನ – ಚರ್ಚ್ ಗಳಿಗೆ ಕಾಣಿಕೆ; ಭಿಕ್ಷುಕರಿಗೂ ಸಹಾಯ ಮಾಡುತ್ತಿದ್ದ ಈ ಕಳ್ಳ…!

ಬೆಂಗಳೂರಿನ ಅಶೋಕನಗರ ಠಾಣೆ ಪೊಲೀಸರು ಇತ್ತೀಚೆಗೆ ಕಳ್ಳನೊಬ್ಬನನ್ನು ಬಂಧಿಸಿದ್ದು, ವಿಚಾರಣೆ ವೇಳೆ ಆತ ಹೇಳಿದ ವಿಷಯ ಕೇಳಿ ಒಂದು ಕ್ಷಣ ಅವಾಕ್ಕಾಗಿದ್ದಾರೆ. ಐಷಾರಾಮಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಈತ ಅದರಲ್ಲಿ ಒಂದಷ್ಟು ಭಾಗವನ್ನು ದಾನ ಧರ್ಮಕ್ಕೆ ವಿನಿಯೋಗಿಸಿರುವುದು ಕಂಡುಬಂದಿದೆ.

ಜಾನ್ ಅಲಿಯಾಸ್ ಮಂಜುನಾಥ ಎಂಬ ಈ ಕಳ್ಳ ತಾನು ಕಳವು ಮಾಡಿದ ಹಣ – ಒಡವೆಗಳ ಪೈಕಿ ಒಂದಷ್ಟು ಹಣವನ್ನು ದೇವಾಲಯ ಹಾಗೂ ಚರ್ಚ್ ಗಳಿಗೆ ಕಾಣಿಕೆ ಸಲ್ಲಿಸಿ ದಾನ ಮಾಡಿದ ತಪ್ಪಿಗೆ ಕ್ಷಮೆ ಕೋರುತ್ತಿದ್ದ ಎನ್ನಲಾಗಿದೆ.

ಅಷ್ಟೇ ಅಲ್ಲ, ದೇವಸ್ಥಾನ ಹಾಗೂ ಚರ್ಚ್ ಹೊರಗೆ ಕುಳಿತಿರುತ್ತಿದ್ದ ಭಿಕ್ಷಕರಿಗೆ ಕೈಲಾದಷ್ಟು ಹಣವನ್ನು ಸಹ ಈತ ನೀಡುತ್ತಿದ್ದ. ಈ ಹಿಂದೆ, ತಾನು ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕ ಸಂಬಳ ಜಾಸ್ತಿ ಮಾಡಿಲ್ಲ ಎಂಬ ಕಾರಣಕ್ಕೆ ಈತ ಎರಡು ಲಕ್ಷ ರೂಪಾಯಿಗಳನ್ನು ಕಳವು ಮಾಡಿದ್ದ ಎಂದು ಹೇಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read