HomeBusinessಮನೆ ಕಟ್ಟುವವರಿಗೆ ಶಾಕಿಂಗ್ ನ್ಯೂಸ್: ಸಿಮೆಂಟ್, ಕಬ್ಬಿಣ, ಮರಳು ದರ ಹೆಚ್ಚಳ; ನೀರು ಸೇರಿ ಕಚ್ಚಾವಸ್ತುಗಳ...

ಮನೆ ಕಟ್ಟುವವರಿಗೆ ಶಾಕಿಂಗ್ ನ್ಯೂಸ್: ಸಿಮೆಂಟ್, ಕಬ್ಬಿಣ, ಮರಳು ದರ ಹೆಚ್ಚಳ; ನೀರು ಸೇರಿ ಕಚ್ಚಾವಸ್ತುಗಳ ಕೊರತೆ

ಮನೆ, ಮಳಿಗೆ, ಕಟ್ಟಡ, ವಾಣಿಜ್ಯ ಸಂಕೀರ್ಣ ನಿರ್ಮಿಸುವವರಿಗೆ ಸಿಮೆಂಟ್ ಸೇರಿ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ನೀರಿನ ಕೊರತೆ, ಕಚ್ಚಾ ವಸ್ತುಗಳ ಅಭಾವ ಎದುರಾಗಿದೆ. ಇದರೊಂದಿಗೆ ಇಟ್ಟಿಗೆ, ಸಿಮೆಂಟ್, ಕಬ್ಬಿಣ, ಎಂ. ಸ್ಯಾಂಡ್ ದರ ಹೆಚ್ಚಳವಾಗಿದೆ. ಕಚ್ಚಾ ವಸ್ತುಗಳು ಸಿಗದ ಕಾರಣ ಸಿಮೆಂಟ್ ಪ್ರತಿ 40 ಕೆಜಿ ಚೀಲಕ್ಕೆ 20 ರೂಪಾಯಿವರೆಗೆ ಹೆಚ್ಚಳವಾಗಿದ್ದು, ಪ್ರತಿ ಟನ್ ಕಬ್ಬಿಣ 4 ರಿಂದ 5 ಸಾವಿರ ರೂ.ವರೆಗೂ ಹೆಚ್ಚಳವಾಗಿದೆ. 4 ಗಜ ಎಂ. ಸ್ಯಾಂಡ್ ಸಾಗಿಸುವ ಪ್ರತಿ ಟ್ರ್ಯಾಕ್ಟರ್ ಗೆ 1500 ರೂಪಾಯಿ ಜಾಸ್ತಿಯಾಗಿ ಮಧ್ಯಮ ವರ್ಗದವರಿಗೆ ಸಂಕಷ್ಟ ಎದುರಾಗಿದೆ.

ಅಗತ್ಯ ನಿರ್ಮಾಣ ಸಾಮಗ್ರಿ ದರ ಹೆಚ್ಚಳ, ನೀರಿನ ಕೊರತೆ ಕಾರಣ ಅನೇಕ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿದೆ. ಗುತ್ತಿಗೆದಾರರು ಮಾಲೀಕರಿಂದ ಹೆಚ್ಚುವರಿ ಮೊತ್ತ ಕೇಳುತ್ತಿದ್ದಾರೆ. ನೀರಿನ ಕೊರತೆ, ಕಚ್ಚಾ ವಸ್ತುಗಳ ಕೊರತೆ, ಬೆಲೆ ಏರಿಕೆಯ ಕಾರಣ ಮನೆ ನಿರ್ಮಾಣಕ್ಕೆ ಪ್ಲಾನ್ ಮಾಡಿಕೊಂಡವರಿಗೆ ಸಂಕಷ್ಟ ಎದುರಾಗಿದ್ದು, ಮನೆಯ ಬಜೆಟ್ ಮತ್ತಷ್ಟು ಏರಿಕೆಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿಷ್ಠಿತ ಕಂಪನಿಗಳ ಸಿಮೆಂಟ್ ದರ 40 ಕೆಜಿ ಚೀಲಕ್ಕೆ ಮೊದಲು 335 ರಿಂದ 360 ರೂ. ವರೆಗೆ ಇತ್ತು. ಈಗ 375 ರೂ. ವರೆಗೆ ತಲುಪಿದೆ. ಕಬ್ಬಿಣ ದರ ಪ್ರತಿ ಕೆಜಿಗೆ 4-5 ರೂ. ಹೆಚ್ಚಳವಾಗಿದ್ದು, ಪ್ರತಿ ಟನ್ 58 ರಿಂದ 62 ಸಾವಿರ ರೂ.ವರೆಗೆ ಹೆಚ್ಚಳವಾಗಿದೆ 4500 ಇದ್ದ ಟ್ರ್ಯಾಕ್ಸರ್ ಎಂ ಸ್ಯಾಂಡ್ ದರ 6 ಸಾವಿರ ರೂ. ಆಗಿದೆ. ಕೆಂಪು ಇಟ್ಟಿಗೆ ದರ 10 ರೂ.ನಿಂದ 11 ರೂ.ಗೆ ಸಣ್ಣ ಸಿಮೆಂಟ್ ಇಟ್ಟಿಗೆ 8 ರೂ., ದೊಡ್ಡ ಸಿಮೆಂಟ್ ಇಟ್ಟಿಗೆ 55 ರಿಂದ 60 ರೂ.ಗೆ ಹೆಚ್ಚಳವಾಗಿದೆ. ಇವೆಲ್ಲಾ ಕಾರಣಗಳಿಂದ ಮನೆ ನಿರ್ಮಿಸುವವರಿಗೆ ತೊಂದರೆ ಎದುರಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular