HomeLatest NewsSHOCKING: ನಾಯಿ ಕಡಿತದಿಂದ ಗಾಯಗೊಂಡಿದ್ದ ಎಮ್ಮೆ ಮೊಸರಿನಿಂದ ರಾಯತ ತಯಾರಿ: ಇಡೀ ಗ್ರಾಮದ ಜನರಿಗೆ ರೇಬಿಸ್...

SHOCKING: ನಾಯಿ ಕಡಿತದಿಂದ ಗಾಯಗೊಂಡಿದ್ದ ಎಮ್ಮೆ ಮೊಸರಿನಿಂದ ರಾಯತ ತಯಾರಿ: ಇಡೀ ಗ್ರಾಮದ ಜನರಿಗೆ ರೇಬಿಸ್ ಆತಂಕ

ಲಖನೌ: ನಾಯಿ ಕಚ್ಚಿ ಗಾಯಗೊಂಡಿದ್ದ ಎಮ್ಮೆಯ ಹಾಲಿನಿಂದ ತಯಾರಿಸಿದ ಮೊಸರಿನಿಂದ ರಾಯತ ತಯಾರಿಸಿ ಸೇವಿಸಿದ್ದ ಇಡೀ ಗ್ರಾಮಕ್ಕೆ ಇದೀಗ ರೇಬಿಸ್ ಆತಂಕ ಶುರುವಾಗಿದೆ.

ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದ 200 ಜನರಿಗೆ ರೇಬಿಸ್ ಹರಡಿರುವ ಆತಂಕ ಮೂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದ ಎಲ್ಲರಿಗೂ ರೇಬಿಸ್ ವಿರೋಧಿ ಲಸಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ವ್ಯಕ್ತಿಯೋರ್ವರ ಪುಣ್ಯತಿಥಿ ನಡೆದಿತ್ತು. ತಿಥಿಗೆ ಹೋಗಿದ್ದ ಗ್ರಾಮಸ್ಥರು ರಾಯತಾ ಸೇರಿದಂತೆ ಹಲವು ಖಾದ್ಯಗಳನ್ನು ಸೇವಿಸಿದ್ದರು. ರಾಯತಾಗೆ ಬಳಸಿದ್ದ ಮೊಸರು ಕೆಲ ದಿನಗಳ ಹಿಂದಷ್ಟೆ ನಾಯಿ ಕಚ್ಚಿದ್ದ ಎಮ್ಮೆಯ ಹಾಲಿನಿಂದ ತಯಾರಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಅಲ್ಲದೇ ಪುಣ್ಯ ತಿಥಿ ಕಾರ್ಯ ಮುಗಿದ ಎರಡು ದಿನಗಳಲ್ಲೇ ನಾಯಿ ಕಚ್ಚಿದ ಎಮ್ಮೆ ಮೃತಪಟ್ಟಿದೆ. ರೇಬಿಸ್ ಲಕ್ಷಣದಿಂದ ಎಮ್ಮೆ ಸಾವನ್ನಪ್ಪಿದೆ. ಇದರಿಂದಾಗಿ ರೇಬಿಸ್ ಕಾಯಿಲೆ ಆತಂಕ ಎದುರಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಷಯ ತಿಳಿಯುತ್ತಿದ್ದಂತೆ ಆರೋಗ್ಯಾಧಿಕಾರಿಗಳು ಗ್ರಾಮಸ್ಥರಿಗೆ ಲಸಿಕೆ ಹಾಕಿಸಿದ್ದಾರೆ. ಗ್ರಾಮಸ್ಥರಲ್ಲಿ ಮುನ್ನೆಚ್ಚರಿಕೆಗೆ ಸೂಚಿಸಲಾಗಿದ್ದು, ಎಲ್ಲರೂ ರೇಬಿಸ್ ಲಸಿಕೆ ಹಾಅಕಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ರಾಮೇಶ್ವರ ಮಿಶ್ರಾ ತಿಳಿಸಿದ್ದಾರೆ.

ಹಾಲನ್ನು ಕುದಿಸಿದ ಬಳಿಕ ರೇಬಿಸ್ ಅಪಾಯ ಇರುವುದಿಲ್ಲ. ಆದರೆ ಯಾವುದೇ ಸಂಭಾವ್ಯ ಅಪಾಯವನ್ನು ತಡೆಗಟ್ಟುವ ಸಲುವಾಗಿ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಅಲ್ಲದೇ ಯಾವುದೇ ವದಂತಿ ಹರಡದಂತೆ ಗ್ರಾಮದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular