BSNL ಹೊರತಂದಿದೆ ಅಗ್ಗದ ಬೆಸ್ಟ್‌ ಪ್ರಿಪೇಯ್ಡ್‌ ಪ್ಲಾನ್‌; 65 ದಿನಗಳ ವ್ಯಾಲಿಡಿಟಿ ಜೊತೆಗೆ ಸಿಗಲಿದೆ ಇಷ್ಟೆಲ್ಲಾ ಪ್ರಯೋಜನ….!

BSNL ಹಲವಾರು ಪ್ರಿಪೇಯ್ಡ್ ಯೋಜನೆಗಳನ್ನು ತರುತ್ತಲೇ ಇರುತ್ತದೆ. ದುಬಾರಿ ಹಾಗೂ ಅಗ್ಗದ ಯೋಜನೆಗಳು ಅದರಲ್ಲಿವೆ. ಇದೀಗ BSNLನ 4G ಗ್ರಾಹಕರಿಗಾಗಿ ಅನಿಯಮಿತ ಕರೆ ಮತ್ತು ಬಂಡಲ್ ಡೇಟಾವನ್ನು ನೀಡಲಾಗ್ತಿದೆ. ಅಂತಹ ಅಗ್ಗದ ಪ್ಲಾನ್‌ ಒಂದನ್ನು ಪರಿಚಯಿಸಲಾಗಿದೆ. ಇದರಲ್ಲಿ 65 ದಿನಗಳ ಮಾನ್ಯತೆ ಲಭ್ಯವಿದೆ. ಈ ಯೋಜನೆಯ ಮೊತ್ತ 319 ರೂಪಾಯಿ.

BSNL319 ರೂ. ಪ್ರಿಪೇಯ್ಡ್ ಪ್ಯಾಕ್

BSNL 319 ರೂಪಾಯಿಯ ಪ್ರಿಪೇಯ್ಡ್‌ ಪ್ಲಾನ್‌, ವಾಯ್ಸ್‌ ಪ್ಯಾಕ್‌ನೊಂದಿಗೆ ಬರುತ್ತದೆ. ಯೋಜನೆಯಲ್ಲಿ 65 ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಇದು ದೆಹಲಿ ಮತ್ತು ಮುಂಬೈ MTNL ರೋಮಿಂಗ್ ವಲಯಗಳನ್ನು ಒಳಗೊಂಡಂತೆ ಅನಿಯಮಿತ ಕರೆ ಮತ್ತು ರಾಷ್ಟ್ರೀಯ ರೋಮಿಂಗ್ ಅನ್ನು ನೀಡುತ್ತದೆ. ಬಳಕೆದಾರರಿಗೆ 10GB ಡೇಟಾ ಮತ್ತು 300 SMS, 65 ದಿನಗಳವರೆಗೆ ಲಭ್ಯವಿದೆ. ಅಂದರೆ, ಎರಡು ತಿಂಗಳಿಗಿಂತ ಹೆಚ್ಚಿನ ಅವಧಿಯ ವ್ಯಾಲಿಡಿಟಿ ಈ ಪ್ಲಾನ್‌ನಲ್ಲಿ  ಲಭ್ಯವಿದೆ.

4G ಅಥವಾ 2G/3G ಸ್ಥಳದಲ್ಲಿರುವವರಿಗೆ ಈ ಯೋಜನೆ ಉತ್ತಮವಾಗಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚು ದಿನಗಳ ವ್ಯಾಲಿಡಿಟಿ ಬಯಸುವವರು ಕೂಡ ಇದನ್ನು ರೀಚಾರ್ಜ್‌ ಮಾಡಿಕೊಳ್ಳಬಹುದು. BSNL ಡೇಟಾ ಪ್ರಯೋಜನವನ್ನು ಕಡಿಮೆ ಮಾಡುವ ಮೂಲಕ ಸುಂಕವನ್ನು ಹೆಚ್ಚಿಸುತ್ತಿದೆ. ಕಂಪನಿಯು ತನ್ನ ಅತ್ಯಂತ ಜನಪ್ರಿಯ ನೈಟ್ ಅನ್‌ಲಿಮಿಟೆಡ್  599 ರೂಪಾಯಿ ಪ್ರಿಪೇಯ್ಡ್ ಪ್ಲಾನ್‌ನಲ್ಲಿನ ಡೇಟಾ ಪ್ರಯೋಜನವನ್ನು ದಿನಕ್ಕೆ 5GB ಯಿಂದ ದಿನಕ್ಕೆ 3GB ಗೆ ಕಡಿಮೆ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read