
ಕರ್ನಾಟಕ ವೃತ್ತದಲ್ಲಿ ದೂರ ಸಂಪರ್ಕ ಅಥವಾ ಬಿಎಸ್ಎನ್ಎಲ್ ನಿಂದ ನಿವೃತ್ತರಾದವರು, ಕುಟುಂಬ ಪಿಂಚಣಿದಾರರು ತಮ್ಮ ಅಹವಾಲುಗಳನ್ನು ಪಿ.ಪಿಓ., ಸಂಖ್ಯೆಯನ್ನು ನಮೂದಿಸಿ ಅಂಚೆ ಅಥವಾ ಇ-ಮೇಲ್ (jtcca2:[email protected]) ಮೂಲಕ ಮೇ 4ರ ಒಳಗೆ ಕಳುಹಿಸಬಹುದಾಗಿದೆ.
ಕಾನೂನು ಅಥವಾ ಉತ್ತರಾಧಿಕಾರಿ ಸಂಬಂಧಿತ ಅಥವಾ ನೀತಿ / ನಿಯಮಾವಳಿ ಸಂಬಂಧಿತ ವಿಷಯಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದ್ದು, ಅದಾಲತ್ ನಡೆಯುವ ಸ್ಥಳ ಹಾಗೂ ಸಮಯವನ್ನು ಅರ್ಜಿದಾರರಿಗೆ ನೇರವಾಗಿ ತಿಳಿಸಲಾಗುತ್ತದೆ.

