HomeKarnatakaಗಣೇಶ ಹಬ್ಬದ ಖರ್ಚು ವೆಚ್ಚದ ವಿಚಾರವಾಗಿ ಜಗಳ: ಸಹೊದರರ ಗಲಾಟೆ ಕೊಲೆಯಲ್ಲಿ ಅಂತ್ಯ

ಗಣೇಶ ಹಬ್ಬದ ಖರ್ಚು ವೆಚ್ಚದ ವಿಚಾರವಾಗಿ ಜಗಳ: ಸಹೊದರರ ಗಲಾಟೆ ಕೊಲೆಯಲ್ಲಿ ಅಂತ್ಯ

ಕಾರವಾರ: ಗಣೇಶ ಹಬ್ಬದ ಖರ್ಚು ವೆಚ್ಚದ ವಿಚಾರವಾಗಿ ಸಹೋದರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಸಂದೇಶ್ ಪ್ರಭಾಕರ್ ಬೋರ್ಕರ್ ಮೃತ ದುರ್ದೈವಿ. ಸಂದೇಶ್ ಚಿಕ್ಕಪ್ಪನ ಮಗ ಮನೀಶ್ ಬೋರ್ಕರ್ ಕೊಲೆ ಮಾಡಿರುವ ಆರೋಪಿ. ಕುಟುಂಬದವರು ಗಣೇಶ್ ಹಬ್ಬದಲ್ಲಿ ಗಣೇಶ್ ಮೂರ್ತಿ ಸ್ಥಾಪಿಸುತ್ತಿದ್ದರು. ಅದರಂತೆಯೇ ಈಬಾರಿಯೂ ಗಣೇಶ ಮೂರ್ತಿ ಕೂರಿಸಿದ್ದಾರೆ. ಹಬ್ಬ ಮುಗಿದ ಬಳಿಕ ಖರ್ಚು-ವೆಚ್ಚದ ವಿಚಾರವಾಗಿ ಸಹೋದರರ ನಡುವೆ ಗಲಾಟೆ ಶುರುವಾಗಿದೆ.

ಗಲಾಟೆ ಎರಡು ಕುಟುಂಬಗಳ ವಾಗ್ವಾದಕ್ಕೂ ಕಾರಣವಾಗಿದೆ. ಅಣ್ಣ-ತಮ್ಮಂದಿರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮನೀಶ್ ತನ್ನ ಚಿಕ್ಕಪ್ಪನ ಮಗ ಸಂದೇಶ್ ಗೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಂದೇಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಾಕು ಇರಿದ ಮನೀಶ್ ಹಾಗೂ ಕುಟುಂಬದ ಇತರರನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular