ಬೆಂಗಳೂರು: ತೋಟದಲ್ಲಿ ನೀರು ಕಟ್ಟುವ ವಿಚಾರಕ್ಕೆ ಸಹೋದರರ ನಡುವೆ ಕಿರಿಕ್ ಶುರುವಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಅಣ್ಣನೇ ತಮ್ಮನ ಮೇಲೆ ಫೈರಿಂಗ್ ಮಾಡಿರುವ ಘಟನೆ ನಡೆದಿದೆ.
ನಾಡಬಂದೂಕಿನಿಂದ ತಮ್ಮನ ಮೇಲೆ ಚಂದ್ರಶೇಖರ್ ಎಂಬಾತ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ತಮ್ಮ ಚೇತನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು ಗ್ರಾಮಾಂತಾರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಶಟ್ಟರಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ನಿನ್ನೆ ಗಲಾಟೆ ಮಾಡುತ್ತಿದ್ದ ಚಂದ್ರಶೇಖರ್ ನನ್ನು ಮನೆಯಲ್ಲಿ ಕೂಡಿಹಾಕಲಾಗಿತ್ತು. ಈ ವೇಳೆ ಸಹೋದರ ಚೇತನ್ ಮರದ ಕೆಳೆಗೆ ಕುಳಿತಿದ್ದ. ಮರದ ಕೆಳೆಗೆ ಕುಳಿತಿದ್ದ ತಮ್ಮನ ಮೇಲೆ ಕಿಟಕಿ ಮೂಲಕ ನಾಡ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾನೆ.
ಘಟನೆ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

