ಶುಭಫಲಕ್ಕಾಗಿ ʼಧನ್ ತೇರಸ್ʼ ದಿನ ಮನೆಗೆ ತನ್ನಿ ಪೊರಕೆ

ದೀಪಾವಳಿ ಹಬ್ಬ ಹತ್ತಿರ ಬರ್ತಿದೆ. ಧನ್ ತೇರಸ್ ಮೂಲಕ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗುತ್ತದೆ. ಉತ್ತರ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಧನ್ ತೇರಸ್ ಹಬ್ಬದಂದು ಬಂಗಾರ ಸೇರಿದಂತೆ ಕೆಲ ವಸ್ತುಗಳನ್ನು ಅವಶ್ಯಕವಾಗಿ ಖರೀದಿ ಮಾಡಬೇಕೆಂಬ ನಂಬಿಕೆಯಿದೆ.

ಧನ್ ತೇರಸ್ ದಿನದಂದು ಪೊರಕೆ ಖರೀದಿ ಶುಭಕರ. ಈ ದಿನ ಪೊರಕೆ ಖರೀದಿ ಮಾಡಿದ್ರೆ ತಾಯಿ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ. ನೀವು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಬೇಗ ಶ್ರೀಮಂತರಾಗಲು ಬಯಸಿದ್ದರೆ ಅವಶ್ಯವಾಗಿ ಧನ್ ತೇರಸ್ ದಿನ ಪೊರಕೆ ಖರೀದಿ ಮಾಡಿ.

 ಧನ್ ತೇರಸ್ ದಿನ ಪೊರಕೆ ಖರೀದಿ ಮಾಡಬೇಕೆಂಬುದು ಎಲ್ಲರಿಗೂ ಗೊತ್ತು. ಆದ್ರೆ ಖರೀದಿ ಮಾಡಿದ ಪೊರಕೆಯನ್ನು ಏನು ಮಾಡಬೇಕೆಂಬುದು ತಿಳಿಯದೆ ತಾಯಿ ಲಕ್ಷ್ಮಿ ಮುನಿಸಿಗೆ ಕಾರಣರಾಗ್ತಾರೆ. ಧನ್ ತೇರಸ್ ದಿನ ಖರೀದಿ ಮಾಡಿದ ಪೊರಕೆಯ ಮೇಲ್ಭಾಗಕ್ಕೆ ಬಿಳಿ ಬಣ್ಣದ ದಾರವನ್ನು ಕಟ್ಟಿ. ಇದು ಮೊದಲು ಮಾಡಬೇಕಾದ ಕೆಲಸ.

ಧನ್ ತೇರಸ್ ದಿನ ಖರೀದಿ ಮಾಡಿದ ಪೊರಕೆಯನ್ನು ಅಪ್ಪಿತಪ್ಪಿಯೂ ತುಳಿಯಬೇಡಿ. ಇದ್ರಿಂದ ತಾಯಿ ಲಕ್ಷ್ಮಿ ಮುನಿಸಿಕೊಳ್ತಾಳೆ.

 ಮಂಗಳವಾರ, ಶನಿವಾರ ಹಾಗೂ ಭಾನುವಾರ ಪೊರಕೆ ಖರೀದಿ ಮಾಡಬೇಡಿ. ಈ ಮೂರು ದಿನ ಮನೆಗೆ ಬಂದ ಪೊರಕೆ ಮನೆಯ ಶಾಂತಿ ಹಾಳು ಮಾಡುತ್ತದೆ.

ಧನ್ ತೇರಸ್ ದಿನ ಮೂರು ಪೊರಕೆ ಖರೀದಿ ಮಾಡಿದ್ರೆ ಶುಭ. ಆಗಿಲ್ಲವೆಂದ್ರೆ ಒಂದು ಪೊರಕೆ ಖರೀದಿ ಮಾಡಿ. ಆದ್ರೆ ಎರಡು ಅಥವಾ ನಾಲ್ಕು ಪೊರಕೆ ಖರೀದಿ ಮಾಡಬೇಡಿ.

ದೀಪಾವಳಿಯ ದಿನ ದೇವಸ್ಥಾನಕ್ಕೆ ತೆರಳಿ ಪೊರಕೆಯನ್ನು ದಾನ ನೀಡಿ. ಸೂರ್ಯೋದಯಕ್ಕಿಂತ ಮೊದಲೇ ಪೊರಕೆಯನ್ನು ದಾನ ನೀಡಬೇಕು. ದೇವಸ್ಥಾನಕ್ಕೆ ದಾನ ಮಾಡುವ ಪೊರಕೆಯನ್ನು ಧನ್ ತೇರಸ್ ಗಿಂತ ಮೊದಲೇ ಖರೀದಿ ಮಾಡಿರಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read