ವೇದಿಕೆ ಮೇಲೆ ಬಂದು ವಧುವಿಗೆ ಚುಂಬಿಸಿದ ಯುವಕ: ಪಕ್ಕದಲ್ಲೇ ಇದ್ದ ವರನಿಗೆ ಬಿಗ್ ಶಾಕ್ | VIDEO

ಮದುವೆ ಮನೆಯಲ್ಲಿ ವೇದಿಕೆ ಮೇಲೆ ಬಂದ ಯುವಕನೊಬ್ಬ ವಧು ತಬ್ಬಿಕೊಂಡು ಚುಂಬಿಸಿದ್ದು, ಪಕ್ಕದಲ್ಲೇ ಕುಳಿತಿದ್ದ ವರ ಇದನ್ನು ಕಂಡು ಶಾಕ್ ಆಗಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.

ಅಂದ ಹಾಗೆ, ವ್ಯಕ್ತಿಯ ಜೀವನದಲ್ಲಿ ಅತ್ಯಂತ ಅಮೂಲ್ಯವಾದ ದಿನವೆಂದರೆ ಅವರ ಮದುವೆ. ಈ ದಿನವನ್ನು ಇನ್ನಷ್ಟು ಭವ್ಯವಾಗಿಸಲು ಜನ ಪ್ಲಾನ್ ಮಾಡಿಕೊಂಡಿರುತ್ತಾರೆ. ಪ್ರೀತಿ ಪಾತ್ರರಿಗೆ ಅನನ್ಯ ವಾತಾವರಣವನ್ನು ಸೃಷ್ಟಿಸುತ್ತಾರೆ. ಆದರೆ, ಕೆಲವೊಮ್ಮೆ ಸಾಂದರ್ಭಿಕವಾಗಿ ಮದುವೆಗಳಲ್ಲಿ ಯೋಜಿತವಲ್ಲದ ಘಟನೆಗಳು ಗಂಭೀರವಾದ ಪರಿಣಾಮವನ್ನುಂಟು ಮಾಡುತ್ತವೆ. ಅಂತಹ ಘಟನೆಯ ವಿಡಿಯೋ ವೈರಲ್ ಆಗಿದೆ.

ಈ ವೀಡಿಯೋದಲ್ಲಿ ಅಲಂಕರಿಸಿದ ವೇದಿಕೆಯಲ್ಲಿ ವಧು ಮತ್ತು ವರರು ಒಟ್ಟಿಗೆ ಕುಳಿತಿರುವುದನ್ನು ತೋರಿಸುತ್ತದೆ. ಒಬ್ಬ ಯುವಕ ವೇದಿಕೆಗೆ ಪ್ರವೇಶಿಸಿ ಮುತ್ತಿಕ್ಕಿದಾಗ ವರನ ಅಭಿವ್ಯಕ್ತಿ ಥಟ್ಟನೆ ಬದಲಾಗುತ್ತದೆ.

ವರನ ಎದುರಲ್ಲೇ ವಧುವಿಗೆ ಬಿಟ್ಟು ಬಿಡದೇ ಚುಂಬಿಸಿದ ಯುವಕನನ್ನು ತಡೆಯಲು ಮತ್ತೊಬ್ಬ ಯುವಕ ಬಂದಿದ್ದಾನೆ. ಪಕ್ಕದಲ್ಲೇ ಕುಳಿತಿದ್ದ ವರ ಶಾಕ್ ಆಗಿದ್ದಾನೆ. ಆನ್‌ಲೈನ್ ಬಳಕೆದಾರರು ಇದಕ್ಕೆ ಭಾರಿ ಪ್ರತಿಕ್ರಿಯೆ ನೀಡಿದ್ದಾರೆ. “ಮದುವೆ ಈಗಾಗಲೇ ನಡೆದಿದೆಯೇ?” ಮತ್ತು “ಈ ವ್ಯಕ್ತಿ ಯಾರು?” ಎಂದೆಲ್ಲಾ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read