ಉಡುಪಿ: ಪ್ರಿಯಕರನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಯುವತಿ ರಕ್ಷಿತಾ ಸಾವನ್ನಪ್ಪಿದ್ದಾರೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಕ್ಷಿತಾ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಬಾವಿಯಲ್ಲಿ ಪ್ರಿಯಕರ ಕಾರ್ತಿಕ್ ಮೃತದೇಹ ಪತ್ತೆಯಾಗಿದೆ. ಪ್ರಿಯತಮೆಯನ್ನು ಇರಿದ ಬಳಿಕ ಕಾರ್ತಿಕ್ ಬಾವಿಗೆ ಹಾರಿದ್ದ.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಮದಲ್ಲಿ ಘಟನೆ ನಡೆದಿತ್ತು. ಮದುವೆಗೆ ಆಕ್ಷೇಪ ಬಂದಿದ್ದಕ್ಕೆ ರಕ್ಷಿತಾ ನಂಬರ್ ಬ್ಲಾಕ್ ಮಾಡಿದ್ದರು. ಈ ಕಾರಣಕ್ಕೆ ಸಿಟ್ಟಿಗೆದ್ದು ಆರೋಪಿ ಕಾರ್ತಿಕ್ ಚಾಕುವಿನಿಂದ ಇರಿದಿದ್ದಾನೆ.
ಇಂದು ರಕ್ಷಿತಾ ಹುಟ್ಟುಹಬ್ಬವಿದ್ದು, ಹುಟ್ಟುಹಬ್ಬದ ದಿನವೇ ರಕ್ಷಿತಾ ಪೂಜಾರಿಗೆ ಚಾಕುವಿನಿಂದ ಇರಿದಿದ್ದ. ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.