ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಕಾಟನಕಲ್ಲು ಗ್ರಾಮದ ಸಮೀಪ ಸಮೀಪ ವಿದ್ಯುತ್ ಹರಿದು ಯುವಕ ಸಾವನ್ನಪ್ಪಿದ್ದಾರೆ.
ನಾಮಗೊಂಡ್ಲು ಗ್ರಾಮದ ನಿವಾಸಿ 21 ವರ್ಷದ ಅಭಿಲಾಷ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ವಿದ್ಯುತ್ ಲೈನ್ ಕಾಮಗಾರಿಯ ವೇಳೆ ಆಕಸ್ಮಿಕವಾಗಿ ಘಟನೆ ಸಂಭವಿಸಿದೆ. ಬೆಸ್ಕಾಂ ಅಧಿಕಾರಿಗಳು, ಗುತ್ತಿಗೆದಾರನ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ.
ಬಿಕಾಂ ಮುಗಿಸಿ ಗುತ್ತಿಗೆದಾರನ ಬಳಿ ಅಭಿಲಾಷ್ ಕೆಲಸಕ್ಕೆ ಸೇರಿದ್ದರು. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.