BREAKING : ನಟ ದರ್ಶನ್ ಗೆ ತಪ್ಪದ ಸಂಕಷ್ಟ : RR ನಗರ ಠಾಣೆಯಲ್ಲಿ ಮತ್ತೆರಡು ದೂರು ದಾಖಲು

ಬೆಂಗಳೂರು : ‘ಡಿ ಬಾಸ್’ ನಟ ದರ್ಶನ್ ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ನಟ ದರ್ಶನ್ ವಿರುದ್ಧ ಮತ್ತೆರಡು  ದೂರು ದಾಖಲಾಗಿದೆ. ಬೆಂಗಳೂರಿನ ಆರ್ ಆರ್ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ನಟ ದರ್ಶನ್ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ಸಂಬಂಧ 2ನೇ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.  ಗಣೇಶ್ ಗೌಡ, ಜಗದೀಶ್ ಎಂಬುವವರು ಈ ದೂರು ದಾಖಲಿಸಿದ್ದಾರೆ.

ನಟ ದರ್ಶನ್ ಗೆ ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಒಕ್ಕಲಿಗರ ಗೌಡತಿಯರ ಸಂಘದಿಂದ ದೂರು ದಾಖಲಾಗಿತ್ತು, ಜಯಶ್ರೀ ಎಂಬುವವರು ಕಾವೇರಿ ಭವನದ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಬೆನ್ನಲ್ಲೇ ಶ್ರೀ ಶಕ್ತಿ ಸಂಘಟನೆ ಇಂದು ದರ್ಶನ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದೆ. ಇವತ್ತು ಇವಳು ಇರ್ತಾಳೆ , ನಾಳೆ ಅವಳು ಇರ್ತಾಳೆ ಎಂದು ಹೇಳುವ ಮೂಲಕ ನಟ ದರ್ಶನ್ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರು ನೀಡಲಾಗಿತ್ತು.

ಇವತ್ತು ಇವಳು ಇರ್ತಾಳೆ , ನಾಳೆ ಅವಳು ಇರ್ತಾಳೆ

ಕಷ್ಟಪಟ್ಟಾಗ ಮಾತುಗಳು ಕಹಿಯಾಗಿರುತ್ತೆ. ಅದು ಕೆಲವರಿಗೆ ಹಿಡಿಸಲ್ಲ. ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. ನನ್ನ ಸೆಲೆಬ್ರಿಟಿಗಳು, ನನ್ನ ಕೆಲಸ ಮುಖ್ಯ, ಬೇರೆಯದಕ್ಕೆ ತಲೆಕೆಡಿಸಿಕೊಳ್ಳಲ್ಲ. ಇವತ್ತು ಇವಳು ಇರ್ತಾಳೆ , ನಾಳೆ ಅವಳು ಇರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ” ಎಂದು ನಟ ದರ್ಶನ್ ಹೇಳಿದ್ದರು. ಅಲ್ಲದೇ ನಿರ್ಮಾಪಕ ಉಮಾಪತಿ ವಿರುದ್ಧ ತಗಡು, ಗುಮ್ಮಿಸ್ಕೊತಿಯಾ ಎಂಬ ಪದ ಬಳಸಿ ತಿರುಗೇಟು ನೀಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read