ನವದೆಹಲಿ: ಗುರುದ್ವಾರ, ಚರ್ಚ್ ಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿಗೆ ಯತ್ನಿಸಿದೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಪೂಂಚ್ ನಲ್ಲಿ ಪಾಕಿಸ್ತಾನ ಸೇನೆಯ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಭಾರತ ಪಾಕಿಸ್ತಾನದ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಿ ಪ್ರತಿಕಾರ ತೀರಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆಯ ಕ್ರಮ ಹೇಡಿತನದ್ದು ಎಂದು ವಿಕ್ರಮ್ ಮಿಶ್ರಿ ಆರೋಪಿಸಿದ್ದಾರೆ. ಭಾರತ ಸಂಯಮದಿಂದ ವರ್ತಿಸಿದೆ. ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದೇವೆ. ಭಾರತದ ವಾಯು ನೆಲೆಯನ್ನು ಗುರಿಯಾಗಿಸಲು ಪಾಕಿಸ್ತಾನ ಪ್ರಯತ್ನ ನಡೆಸಿದೆ. ಉಗ್ರರ ವಿರುದ್ಧದ ಭಾರತದ ಹೋರಾಟಕ್ಕೆ ಅಮೆರಿಕ, ಬ್ರಿಟನ್ ಬೆಂಬಲ ನೀಡಿವೆ ಎಂದು ಹೇಳಿದ್ದಾರೆ.
LOC ಉದ್ದಕ್ಕೂ ಶಾಲೆಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ದಾಳಿ ಬಗ್ಗೆ ಮಾಹಿತಿ ನೀಡಿದ ವಿಕ್ರಮ್ ಮಿಶ್ರಿ, ಮೇ 7 ರ ಮುಂಜಾನೆ LOCಯಾದ್ಯಂತ ಭಾರೀ ಶೆಲ್ ದಾಳಿಯ ಸಮಯದಲ್ಲಿ, ಪಾಕಿಸ್ತಾನದಿಂದ ಹಾರಿಸಲಾದ ಶೆಲ್ ಕ್ರೈಸ್ಟ್ ಶಾಲೆಯ ಹಿಂದೆ ಬಿದ್ದಿತು ಪೂಂಚ್ ಶಾಲೆಯ ಇಬ್ಬರು ವಿದ್ಯಾರ್ಥಿಗಳ ಮನೆಗೆ ಶೆಲ್ ಬಡಿದಿದ್ದು, ದುರದೃಷ್ಟವಶಾತ್ ಅವರು ಪ್ರಾಣ ಕಳೆದುಕೊಂಡರು ಮತ್ತು ಅವರ ಪೋಷಕರು ಗಾಯಗೊಂಡಿದ್ದಾರೆ.
ಪಾಕಿಸ್ತಾನದ ಶೆಲ್ ದಾಳಿಯ ಸಮಯದಲ್ಲಿ ಹಲವಾರು ಶಾಲಾ ಸಿಬ್ಬಂದಿ ಮತ್ತು ಸ್ಥಳೀಯರು ಶಾಲೆಯ ಭೂಗತ ಸಭಾಂಗಣದಲ್ಲಿ ಆಶ್ರಯ ಪಡೆದರು. ಶಾಲೆಯನ್ನು ಅದೃಷ್ಟವಶಾತ್ ಮುಚ್ಚಲಾಯಿತು, ಇಲ್ಲದಿದ್ದರೆ ಹೆಚ್ಚಿನ ಹಾನಿಯಾಗುತ್ತಿತ್ತು. ಪಾಕಿಸ್ತಾನವು ಗುರುದ್ವಾರಗಳು, ಚರ್ಚ್ಗಳು ಮತ್ತು ದೇವಾಲಯಗಳು ಸೇರಿದಂತೆ ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸುತ್ತಿದೆ ಎಂದು ಹೇಳಿದ್ದಾರೆ.
#WATCH | Delhi: On Pakistan targeting schools and religious places along the LOC, Foreign Secretary Vikram Misri says, "… During heavy shelling across the LOC in the early morning of 7 May, a shell fired from Pakistan landed just behind the Christ School in Poonch. The shell… pic.twitter.com/yvG3FBYkpJ
— ANI (@ANI) May 9, 2025
#WATCH | Delhi: Foreign Secretary Vikram Misri says, "Yes, the Minister (Dr S Jaishankar) had a conversation with the US Secretary of State. The focus of discussions was the terrorist attack in Pahalgam and the response that India mounted after that on the 7th of May. The… pic.twitter.com/ls1hs1SdiC
— ANI (@ANI) May 9, 2025