HomeLatest NewsBREAKING: ಕೊಪ್ಪಳದಲ್ಲಿ ಘೋರ ದುರಂತ: ಲಾರಿಯಿಂದ ಪೈಪ್ ಇಳಿಸುವಾಗ ಇಬ್ಬರು ಕಾರ್ಮಿಕರು ಸಾವು

BREAKING: ಕೊಪ್ಪಳದಲ್ಲಿ ಘೋರ ದುರಂತ: ಲಾರಿಯಿಂದ ಪೈಪ್ ಇಳಿಸುವಾಗ ಇಬ್ಬರು ಕಾರ್ಮಿಕರು ಸಾವು

ಕೊಪ್ಪಳ: ಲಾರಿಯಿಂದ ಪೈಪ್ ಇಳಿಸುವಾಗ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ.

ದೊಂಗರಪ್ಪ ಇಟ್ಲಾಪುರ(18), ಶಿವಪ್ಪ ಗಡದ(28) ಮೃತಪಟ್ಟವರು ಎಂದು ಹೇಳಲಾಗಿದೆ. ದೊಂಗರಪ್ಪ ಇಳಕಲ್ ತಾಲೂಕಿನ ತೊಂಡಿಹಾಳ ಗ್ರಾಮದ ನಿವಾಸಿಯಾಗಿದ್ದಾರೆ. ಶಿವಪ್ಪ ಗಡದ ಕನಕಗಿರಿ ತಾಲೂಕಿನ ಓಬಳಬಂಡಿ ಗ್ರಾಮದ ನಿವಾಸಿಯಾಗಿದ್ದಾರೆ.

ಆಲಮಟ್ಟಿಯಿಂದ ಕುಷ್ಟಗಿಗೆ ನೀರು ಪೂರೈಸುವ ಅಮೃತ ಯೋಜನೆ ಕಾಮಗಾರಿಗಾಗಿ ಲಾರಿಯಲ್ಲಿ ಪೈಪ್ ಗಳನ್ನು ತರಿಸಲಾಗಿತ್ತು. ಅವುಗಳನ್ನು ಇಳಿಸುವಾಗ ಪೈಪ್ ಗಳ ಅಡಿಯಲ್ಲಿ ಸಿಲುಕಿ ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ವಿಜಯಪುರ ಮೂಲದ ರಾಜ್ ರಾಥೋಡ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಕಾರ್ಮಿಕನನ್ನು ಕುಷ್ಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular