ಮಂಡ್ಯ: ಹೆದ್ದಾರಿಯಲ್ಲಿ ದರೋಡೆ ಮಾಡ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು ದರೋಡೆ ಮಾಡಿ ಸಿಕ್ಕಿ ಬಿದ್ದಿದ್ದಾರೆ.
ಮಂಡ್ಯ ಪೊಲೀಸರು ಮೂವರು ಹೆದ್ದಾರಿ ದರೋಡೆಕೋರರನ್ನು ಬಂಧಿಸಿದ್ದಾರೆ. ವೇಗವಾಗಿ ಹಣ ಸಂಪಾದನೆಗಾಗಿ ತಂಡವು ರಾಬರಿಗೆ ಇಳಿದಿತ್ತು. ದುಶ್ಚಟಗಳ ಹಿಂದೆ ಬಿದ್ದಿದ್ದ ಬೆಂಗಳೂರಿನ ಬಿಎಂಎಸ್ ಕಾಲೇಜು ವಿದ್ಯಾರ್ಥಿಗಳು ದರೋಡೆ ಮಾಡಿ ಸಿಕ್ಕಿ ಬಿದ್ದಿದ್ದಾರೆ.
ಕಿರಣ್, ಕುಶಾಲ್ ಬಾಬು, ಗೋಕುಲ್ ಅವರನ್ನು ಬಂಧಿಸಲಾಗಿದೆ. ಬಸ್ ನಿಲ್ದಾಣದ ಬಳಿ ಬಸ್ ಗಾಗಿ ನಿಲ್ಲುತ್ತಿದ್ದವರನ್ನು ಡ್ರಾಪ್ ಮಾಡುವುದಾಗಿ ಕಾರ್ ನಲ್ಲಿ ಹತ್ತಿಸಿಕೊಂಡು ರಾಬರಿ ಮಾಡುತ್ತಿದ್ದರು. ಅಪಾರ್ಟ್ ಮೆಂಟ್ ಗಳನ್ನು ಬಾಡಿಗೆ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರು. ಮಂಡ್ಯ ಜಿಲ್ಲೆಯಲ್ಲಿ ಹಲವೆಡೆ ಕೃತ್ಯವೆಸಗಿದ್ದರು. ಮಂಡ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
