ಮೈಸೂರು: ಮನೆಯ ಹಿಂಬದಿ ಬಾಗಿಲಿನಿಂದ ನುಗ್ಗಿ ಚಿನ್ನಾಭರಣ ಕಳವು ಮಾಡಲಾಗಿದೆ. ಮೈಸೂರು ಜಿಲ್ಲೆ ನಂಜನಗೂಡಿನ ಚಾಮುಂಡಿ ಟೌನ್ ಶಿಪ್ ನಲ್ಲಿ ಘಟನೆ ನಡೆದಿದೆ.
ಮನೆಯ ಬೀಗ ಮುರಿದು 80 ಗ್ರಾಂ ಚಿನ್ನ, ಬೆಳ್ಳಿ, 1.40 ಲಕ್ಷ ರೂ. ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿ ಪುನೀತ್ ಕುಮಾರ್ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಮನೆ ಮಾಲೀಕರು ಬಂದರೂ ಕಳ್ಳರು ವಿಚಲಿತರಾಗಿಲ್ಲ. ಮನೆ ಮಾಲೀಕರ ಮುಂದೆಯೇ ಕಾರ್ ನಲ್ಲಿ ಕಳ್ಳರು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.