BREAKING : ರದ್ದಾಗಿದ್ದ ‘ಹಾಸನಾಂಬೆ’ ವಿಶೇಷ ದರ್ಶನದ ಟಿಕೆಟ್ ಕೌಂಟರ್ ಮತ್ತೆ ರೀ ಓಪನ್.!

ಹಾಸನ : ಹಾಸನಾಂಬೆ ದೇವಿಯ ದರ್ಶನಕ್ಕೆ ನೀಡಲಾಗುತ್ತಿದ್ದ ಪಾಸ್ ನ್ನು ನಿನ್ನೆ ರದ್ದು ಮಾಡಲಾಗಿತ್ತು, ಆದಾಯದ ಆಸೆಗೆ ಜೋತುಬಿದ್ದ ಆಡಳಿತ ಮಂಡಳಿ ರದ್ದಾಗಿದ್ದ ಹಾಸನಾಂಬೆ ದರ್ಶನದ ಟಿಕೆಟ್ ಕೌಂಟರ್’ ರನ್ನು ಮತ್ತೆ ರೀ ಓಪನ್ ಮಾಡಿದೆ.ಆನ್ ಲೈನ್ ಜೊತೆಗೆ ಆಫ್ ಲೈನ್ ನಲ್ಲಿ ಈಗ 300, 400 ರೂ ಬೆಲೆಯ ವಿಶೇಷ ಪಾಸ್ ಮಾರಾಟ ಮಾಡಲಾಗುತ್ತಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 

ಹೌದು, ತಡರಾತ್ರಿಯಿಂದ ಹಾಸನಾಂಬೆ ದೇವಾಲಯದ ಪಾಸ್’ ಕೌಂಟರ್ ರನ್ನು ಮತ್ತೆ ಓಪನ್ ಮಾಡಲಾಗಿದೆ.
ಈ ವರ್ಷ ಭಾರಿ ಸಂಖ್ಯೆಯಲ್ಲಿ ಭಕ್ತರು ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದರಿಂದ ಸುಗಮದರ್ಶನಕ್ಕೆ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಹರಸಾಹಸ ನಡೆಸಿದೆ. ಧರ್ಮದರ್ಶನದ ಸಾಲು 3 ಕಿ.ಮೀ.ವರೆಗೂ ಇದ್ದು, ಇನ್ನು ವಿಐಪಿ, ವಿವಿಐಪಿ, ಒಂದು ಸಾವಿರ ರೂಪಾಯಿಯ ವಿಶೇಷ ಪಾಸ್, ಮತ್ತಿತರ ಪಾಸುಗಳನ್ನು ಹೊಂದಿದವರ ಸಾಲಿನಲ್ಲಿಯೂ ಉದ್ದನೆಯ ಕ್ಯೂ ಇತ್ತು.

ಈ ಬಾರಿ 20 ಲಕ್ಷ ಮಂದಿ ಹಾಸನಾಂಬ ದೇವಿಯ ದರ್ಶನ ಪಡೆಯಬಹುದೆಂದು ಜಿಲ್ಲಾಡಳಿತ ಅಂದಾಜಿಸಿದ್ದರೂ ಅದಕ್ಕಿಂತಲೂ ಹೆಚ್ಚು ಜನ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ಗೊಂದಲ ಉಂಟಾಯಿತು. ಜನರನ್ನು ನಿಯಂತ್ರಿಸುವುದೇ ಸವಾಲಾಗಿ ಪರಿಣಮಿಸಿದ್ದು, ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿರುವ ವಿಐಪಿ ಪಾಸ್ ಗಳಿಂದ ಜಿಲ್ಲಾಡಳಿತ ಆಕ್ರೋಶಕ್ಕೆ ಗುರಿಯಾಗಿ ಕೊನೆಗೆ ಪಾಸ್ ಗಳನ್ನು ರದ್ದು ಮಾಡಲಾಗಿತ್ತು.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read