HomeIndiaBREAKING : ಉತ್ತರಾಖಂಡದಲ್ಲಿ ಭೀಕರ ಅಪಘಾತ : ಮದುವೆ ದಿಬ್ಬದ ಬಸ್ ಕಮರಿಗೆ ಬಿದ್ದು30 ಮಂದಿ...

BREAKING : ಉತ್ತರಾಖಂಡದಲ್ಲಿ ಭೀಕರ ಅಪಘಾತ : ಮದುವೆ ದಿಬ್ಬದ ಬಸ್ ಕಮರಿಗೆ ಬಿದ್ದು30 ಮಂದಿ ಸಾವು..!

ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಮದುವೆ ದಿಬ್ಬಣವನ್ನು ಕರೆದೊಯ್ಯುತ್ತಿದ್ದ ಬಸ್ 200 ಅಡಿ ಆಳದ ಕಮರಿಗೆ ಬಿದ್ದಿದೆ.ಸುಮಾರು 25 ರಿಂದ 30 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಸಾವಿನ ಸಂಖ್ಯೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಬಸ್ ಹರಿದ್ವಾರದ ಲಾಲ್ಧಾಂಗ್ನಿಂದ ಪೌರಿಯ ಬಿರೋಂಖಲ್ ಗ್ರಾಮಕ್ಕೆ ಹೋಗುತ್ತಿತ್ತು. ಘಟನೆಯ ಬಗ್ಗೆ ಮಾಹಿತಿ ಪಡೆದ ಉತ್ತರಾಖಂಡ ವಿಧಾನಸಭಾ ಸ್ಪೀಕರ್ ರಿತು ಖಂಡೂರಿ ಸ್ಥಳಕ್ಕೆ ತಲುಪಿದರು.

ರಾತ್ರಿ 8 ಗಂಟೆ ಸುಮಾರಿಗೆ ಸಿಮಂಡಿ ಗ್ರಾಮದ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಆಳವಾದ ಕಮರಿಗೆ ಬಿದ್ದಿದೆ. ಬಸ್ಸಿನಲ್ಲಿ 40-50 ಮದುವೆ ಅತಿಥಿಗಳಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಸ್ಥಳೀಯ ಪೊಲೀಸರು ಮತ್ತು ಎಸ್ಡಿಆರ್ಎಫ್ ತಂಡ ಸ್ಥಳಕ್ಕೆ ತಲುಪಿತು, ನಂತರ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular