ಬೆಂಗಳೂರು: ಗುಂಡು ಹಾರಿಸಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಬಸವೇಶ್ವರನಗರದ ವೇಸ್ಟಿನ್ ಹೋಟೆಲ್ ಬಳಿ ನಡೆದಿದೆ.
ಬಾಲಮುರುಗನ್ ಪತ್ನಿ ಕೊಲೆ ಮಾಡಿದ ಆರೋಪಿ ಎಂದು ಹೇಳಲಾಗಿದೆ. ಏಕಾಏಕಿ ಗನ್ ತೆಗೆದು ಪತ್ನಿಯ ಮೇಲೆ ಫೈರಿಂಗ್ ಮಾಡಿದ ಬಾಲಮುರುಗನ್ ಗುಂಡು ಹಾರಿಸಿ ಪತ್ನಿ ಕೊಲೆ ಮಾಡಿದ್ದಾರೆ. ಪತ್ನಿಯನ್ನು ಕೊಲೆ ಮಾಡಿ ಬಾಲಮುರುಗನ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ.
ದಂಪತಿಯ ಡೈವೋರ್ಸ್ ಕೇಸ್ ವಿಚಾರಣೆ ಕೋರ್ಟ್ ನಲ್ಲಿತ್ತು. ಇಂದು ಇಬ್ಬರೂ ವಿಚಾರಣೆ ಮುಗಿಸಿಕೊಂಡು ಬಂದಿದ್ದು, ಈ ವೇಳೆ ದಂಪತಿಯ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿ ಏಕಾಏಕಿ ಗನ್ ತೆಗೆದು ಗುಂಡು ಹಾರಿಸಿ ಪತ್ನಿಯನ್ನು ಕೊಲೆ ಮಾಡಲಾಗಿದೆ.
ಗುಂಡೇಟು ತಿಂದು ಬಾಲಮುರುಗನ್ ಪತ್ನಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಾಗಡಿ ರೋಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

