ಬೆಂಗಳೂರು : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಜಗಳ ವದಂತಿ ಹರಡಿದ ಕಿಡಿಗೇಡಿ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ವಕೀಲ ಸಿ.ಆರ್ ದೀಪು ಎಂಬುವವರು ನೀಡಿದ ದೂರಿನ ಮೇರೆಗೆ ಕನ್ನಡಚಿತ್ರರಂಗದ ಹೆಸರಿನ ಇನ್ ಸ್ಟಾಂ ಖಾತೆದಾರನ ಮೇಲೆ ಪ್ರಕರಣ ದಾಖಲಾಗಿದೆ. ಇನ್ ಸ್ಟಾಗ್ರಾಂ ಖಾತೆಯಲ್ಲಿ ‘ಕನ್ನಡ ಚಿತ್ರರಂಗ’ ಎಂಬ ಹೆಸರಿನಲ್ಲಿ ಖಾತೆಯಲ್ಲಿ ವಿಡಿಯೋವೊಂದು ಅಪ್ ಲೋಡ್ ಆಗಿತ್ತು. ಈ ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯರನ್ನ ಸಭೆಯಲ್ಲಿ ಡಿಕೆ ಶಿವಕುಮಾರ್ ದೂಡಿದ್ದಾರೆ ಎಂದು ಬಿಂಬಿಸಲಾಗಿತ್ತು. ಈತ ಎಐ ಮೂಲಕ ಇಂತಹ ವಿಡಿಯೋ ಸೃಷ್ಟಿ ಮಾಡಿದ್ದನು. ಸದ್ಯ ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.
