HomeKarnatakaBREAKING : ಬೆಂಗಳೂರಿನಲ್ಲಿ ಮುಂದುವರೆದ ಪುಡಿ ರೌಡಿಗಳ ಅಟ್ಟಹಾಸ : 21 ಕಾರುಗಳು ಧ್ವಂಸ

BREAKING : ಬೆಂಗಳೂರಿನಲ್ಲಿ ಮುಂದುವರೆದ ಪುಡಿ ರೌಡಿಗಳ ಅಟ್ಟಹಾಸ : 21 ಕಾರುಗಳು ಧ್ವಂಸ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಪುಡಿರೌಡಿಗಳ ಅಟ್ಟಹಾಸ ಮಿತಿಮೀರಿದ್ದು,  ತಡರಾತ್ರಿ ಲಗ್ಗೆರೆ ಬಳಿ ಕಾರುಗಳ ಗ್ಲಾಸ್ ಒಡೆದು ಪುಂಡಾಟಿಕೆ ಮೆರೆದಿರುವ ಘಟನೆ ನಡೆದಿದೆ.

ಬೆಂಗಳೂರಿನ ಲಗ್ಗೆರೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ 21 ಕಾರುಗಳನ್ನು ಪುಡಿರೌಡಿಗಳು ಧ್ವಂಸ ಮಾಡಿದ್ದಾರೆ.  ದೊಣ್ಣೆ, ಲಾಂಗುಗಳಿಂದ ಕಾರುಗಳಿಗೆ ಹಾನಿ ಮಾಡಿರುವ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ರಾಜಗೋಪಾಲನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular