HomeEntertainmentBREAKING : ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಬಹು ನಿರೀಕ್ಷಿತ ‘ಬಘೀರ’ ಚಿತ್ರದ ಟ್ರೇಲರ್ ರಿಲೀಸ್...

BREAKING : ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಬಹು ನಿರೀಕ್ಷಿತ ‘ಬಘೀರ’ ಚಿತ್ರದ ಟ್ರೇಲರ್ ರಿಲೀಸ್ |Watch Trailer

ಸಿನಿಮಾ ಡೆಸ್ಕ್ : ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಬಹು ನಿರೀಕ್ಷಿತ ‘ಬಘೀರ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

ಡಾ. ಸೂರಿ ನಿರ್ದೇಶನದ ಶ್ರೀ ಮುರಳಿ ಅಭಿನಯದ ಬಹು ನಿರೀಕ್ಷಿತ ‘ಬಘೀರ’ ಚಿತ್ರ ಈಗಾಗಲೇ ತನ್ನ ಟೀಸರ್ ಮೂಲಕವೇ ಭರ್ಜರಿ ಸೌಂಡ್ ಮಾಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಸದ್ಯ, ಚಿತ್ರತಂಡ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದೆ. ಸಿನಿಮಾದಲ್ಲಿ ನಟ ಮುರುಳಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದು, ಶ್ರೀ ಮುರಳಿ ಸೇರಿದಂತೆ ರುಕ್ಮಿಣಿ ವಸಂತ್, ಪ್ರಕಾಶ್ ರಾಜ್. ರಂಗಾಯಣ ರಘು. ಅಚ್ಯುತ್ ಕುಮಾರ್. ಬಣ್ಣ ಹಚ್ಚಿದ್ದಾರೆ. ಬಿ. ಅಜನೇಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದು, ಪ್ರಣವ್ ಶ್ರೀ ಪ್ರಸಾದ್ ಸಂಕಲನ, ಚೇತನ್ ಡಿಸೋಜಾ ಸಾಹಸ ನಿರ್ದೇಶನ, ಆದರ್ಶ, ಸ್ವರೂಪ್, ಹಾಗೂ ಸಮಂತ್ ಅವರ ಛಾಯಾಗ್ರಾಹಣವಿದೆ. ಅಕ್ಟೋಬರ್ 31 ರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular