HomeIndiaBREAKING : ರಾಮಮಂದಿರದ ಗರ್ಭಗುಡಿಯಲ್ಲಿ ʻಪ್ರಧಾನಿ ಮೋದಿʼ : ಐತಿಹಾಸಿಕ ʻರಾಮಲಲ್ಲಾʼ ವಿಗ್ರಹ ʻಪ್ರತಿಷ್ಠಾಪನೆʼ ಪೂಜೆಯಲ್ಲಿ...

BREAKING : ರಾಮಮಂದಿರದ ಗರ್ಭಗುಡಿಯಲ್ಲಿ ʻಪ್ರಧಾನಿ ಮೋದಿʼ : ಐತಿಹಾಸಿಕ ʻರಾಮಲಲ್ಲಾʼ ವಿಗ್ರಹ ʻಪ್ರತಿಷ್ಠಾಪನೆʼ ಪೂಜೆಯಲ್ಲಿ ಭಾಗಿ

ಅಯೋಧ್ಯೆ : ಹಿಂದೂಗಳ ಶತಮಾನಗಳ ಕಾಯುವಿಕೆ ಅಂತ್ಯವಾಗಿದ್ದು, ಐತಿಹಾಸಿಕ ಅಯೋಧ್ಯೆಯ ರಾಮಮಂದಿರದಲ್ಲಿ ಭಗವಾನ್‌ ರಾಮಲಲ್ಲಾನ ವಿಗ್ರಹ ಪ್ರಾಣಪ್ರತಿಷ್ಠಾಪನೆ ವಿಶೇಷ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ.

ಇಂದು ಮಧ್ಯಾಹ್ನದ ಶುಭ ಸಮಯವು 12.29 ನಿಮಿಷ 08 ಸೆಕೆಂಡುಗಳಿಂದ 12.30 ನಿಮಿಷ 32 ಸೆಕೆಂಡುಗಳ ಮುಹೂರ್ತದಲ್ಲಿ ಪ್ರತಿಷ್ಠಾಪನೆ ನಡೆಯಲಿದೆ. ಶುಭ ಸಮಯ ಕೇವಲ 84 ಸೆಕೆಂಡುಗಳು. ಪ್ರಸಿದ್ಧ ವೈದಿಕ ಆಚಾರ್ಯ ಗಣೇಶ್ ದ್ರಾವಿಡ್ ಮತ್ತು ಕಾಶಿಯ ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ಅವರ ನಿರ್ದೇಶನದಲ್ಲಿ 121 ವೈದಿಕ ಆಚಾರ್ಯರು ಈ ಪ್ರಾಣ ಪ್ರತಿಷ್ಠಾನ ಆಚರಣೆಗಳನ್ನು ನಡೆಸಿದ್ದಾರೆ. ಈ ಅವಧಿಯಲ್ಲಿ 150 ಕ್ಕೂ ಹೆಚ್ಚು ಸಂಪ್ರದಾಯಗಳ ಸಂತರು ಮತ್ತು ಧಾರ್ಮಿಕ ಮುಖಂಡರು ಮತ್ತು 50 ಕ್ಕೂ ಹೆಚ್ಚು ಗಿರಿವಾಸಿಗಳು, ಕರಾವಳಿ ನಿವಾಸಿಗಳು, ದ್ವೀಪವಾಸಿಗಳು, ಬುಡಕಟ್ಟು ಜನಾಂಗದವರು ಸಹ ಉಪಸ್ಥಿತರಿರಲಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular