ಬೆಂಗಳೂರು: ನಟ ಯಶ್ ತಾಯಿ, ನಿರ್ಮಾಪಕಿ ಪುಷ್ಪಾ ಅವರಿಗೆ ನಟಿ ದೀಪಿಕಾ ದಾಸ್ ವಾರ್ನ್ ಮಾಡಿದ್ದು, ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ ಎಂದು ತಿಳಿಸಿದ್ದಾರೆ.
ಹೊಸ ಕಲಾವಿದರನ್ನು ಬೆಳೆಸುವ ಜನರು ಕಲಾವಿದರಿಗೆ ಬೆಲೆ ಕೊಡಬೇಕು. ಇಲ್ಲಿವರೆಗೂ ಯಾರ ಹೆಸರು ಹೇಳಿಕೊಂಡು ಬಂದಿಲ್ಲ, ಮುಂದೆಯೂ ಬರುವುದಿಲ್ಲ. ಕೆಲವರಿಗೆ ಬೆಲೆ ಕೊಟ್ಟ ಮಾತ್ರಕ್ಕೆ ಯಾರನ್ನೋ ಕಂಡು ಭಯ ಯಾರಿಗೂ ಇಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿಯೇ ಎಂದು ತಿಳಿಸಿದ್ದಾರೆ.
ಯಶ್ ಗೆ ರೆಸ್ಪೆಕ್ಟ್ ಇರುತ್ತೆ. ಆದರೆ, ಎಲ್ಲರಿಗೂ ಅಲ್ಲ ಎಂದು ದೀಪಿಕಾ ಹೇಳಿದ್ದಾರೆ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ ಏನೂ ಸಾಧನೆ ಮಾಡದಿದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ದೀಪಿಕಾ ದಾಸ್ ಪೋಸ್ಟ್ ಮಾಡಿದ್ದಾರೆ.
ಸಂದರ್ಶನದಲ್ಲಿ ದೀಪಿಕಾ ದಾಸ್ ನಮಗೆ ಭಯಪಡುತ್ತಾಳೆ ಎಂದು ‘ಕೊತ್ತಲವಾಡಿ’ ಸಿನಿಮಾ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಹೇಳಿದ್ದರು.
