ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಲಾಗಿದೆ. ಪಿಎನ್. ದೇಸಾಯಿ ವಿಚಾರಣಾ ಆಯೋಗ ಸಿದ್ದರಾಮಯ್ಯ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿತ್ತು.
ಪ್ರಕರಣದ ತನಿಖೆಗೆ ಏಕ ಸದಸ್ಯ ಆಯೋಗವನ್ನು ಸರ್ಕಾರ ರಚನೆ ಮಾಡಿತ್ತು. ಇಂದು ಕ್ಯಾಬಿನೆಟ್ ನಲ್ಲಿ ಪಿಎಂ ದೇಸಾಯಿ ವರದಿಯನ್ನು ಅಂಗೀಕರಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಲಾಗಿದೆ.
ಡಿಕೆ ಬೆಂಬಲಿಗರ ಕೇಸ್ ವಾಪಸ್
ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿಗರ ಪ್ರಕರಣಗಳು ಸೇರಿ ಬೇರೆ ಬೇರೆಯ 62 ಕ್ರಿಮಿನಲ್ ಕೇಸ್ ಗಳನ್ನು ಸಂಪುಟ ಸಭೆ ಹಿಂಪಡೆದುಕೊಂಡಿದೆ. ಡಿ.ಕೆ. ಬೆಂಬಲಿಗರ 11 ಪ್ರಕರಣಗಳನ್ನು ಸಂಪುಟ ಸಭೆ ಕೈಬಿಡಲು ತೀರ್ಮಾನ ಕೈಗೊಂಡಿದೆ. 2019ರಲ್ಲಿ ಡಿಕೆ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು, ಅವರ ಬಂಧನ ಖಂಡಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಡಿಕೆ ಬೆಂಬಲಿಗರ ವಿರುದ್ಧ ಕೇಸು ದಾಖಲಾಗಿದ್ದು, 11 ಪ್ರಕರಣಗಳಲ್ಲಿ ಡಿಕೆ ಬೆಂಬಲಿಗರು ಕಾರ್ಯಕರ್ತರು ಸಿಲುಕಿದ್ದರು.