
ತಾವು ಬಿಜೆಪಿಯನ್ನು ಬಿಡುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದ ಅವರು, ಕೆಲವರು ಸುಮ್ಮನೆ ತೇಜೋವಧೆ ಮಾಡುವ ಸಲುವಾಗಿ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ಅವರಿಗೆ ಯಾವ ಲಾಭವಿದೆಯೋ ಗೊತ್ತಿಲ್ಲ ಎಂದಿದ್ದಾರೆ.
ನಾನು ಪ್ರಾಮಾಣಿಕ ವ್ಯಕ್ತಿ. ಸ್ವಾಭಿಮಾನ ಮಾರಾಟ ಮಾಡಿ ಜೀವನ ಮಾಡುವವನು ನಾನಲ್ಲ ಎಂದು ಹೇಳಿದ ಸೋಮಣ್ಣ, ನಾನು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದವನು. ಸುಳ್ಳು ಹೇಳಲು ನನಗೆ ಬರುವುದಿಲ್ಲ. ಶಿವಕುಮಾರ ಶ್ರೀಗಳೇ ನನಗೆ ಆದರ್ಶ ಎಂದು ಹೇಳಿದ್ದಾರೆ.

