
ಬೆಂಗಳೂರಿನ ಹಲಸೂರು ಬಳಿ ವಾಸವಾಗಿದ್ದ ಅಣ್ಣ-ತಮ್ಮನ ನಡುವೆ ಕ್ಷುಲ್ಕ ವಿಚಾರವಾಗಿ ಗಲಾಟೆಯಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದ ಪರಿಣಾಮ ತಮ್ಮ ವಿಜಯ್ ಅಣ್ಣ ಕಾರ್ತೀಕ್ ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಹಲಸೂರು ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

