HomeKarnatakaBREAKING NEWS: ಬಿಜೆಪಿಯ ಮತ್ತಿಬ್ಬರು ಸಚಿವರಿಗೆ ಸೋಲು

BREAKING NEWS: ಬಿಜೆಪಿಯ ಮತ್ತಿಬ್ಬರು ಸಚಿವರಿಗೆ ಸೋಲು

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಲು ಸಾಲು ಸಚಿವರುಗಳು ಸೋಲನುಭವಿಸಿದ್ದು, ಅಚ್ಚರಿಗೆ ಕಾರಣವಾಗಿದೆ. ಸಚಿವರಾದ ವಿ. ಸೋಮಣ್ಣ, ಶ್ರೀರಾಮುಲು, ಸುಧಾಕರ್, ಗೋವಿಂದ ಕಾರಜೋಳ ಬೆನ್ನಲ್ಲೇ ಬಿಜೆಪಿಯ ಮತ್ತಿಬ್ಬರು ಸಚಿವರು ಪರಾಭವಗೊಂಡಿದ್ದಾರೆ.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ನಾರಾಯಾಣಗೌಡ ಹೀನಾಯ ಸೋಲನಭವಿಸಿದ್ದಾರೆ. ಜೆಡಿಎಸ್ ನ ಹೆಚ್.ಟಿ. ಮಂಜು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಇನ್ನು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವ ಮಾಧುಸ್ವಾಮಿ ಸೋಲನುಭವಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬು ಜಯಭೇರಿ ಬಾರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular