ಶಿವಮೊಗ್ಗದ ವಿನೋಬನಗರ ಠಾಣೆಯ ಇನ್ಸ್ಪೆಕ್ಟರ್ ಚಂದ್ರಕಲಾ ಅವರನ್ನು ಅಮಾನತು ಮಾಡಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಚಂದ್ರಕಲಾ ಅವರು ವಿನೋಬನಗರ ಪೊಲೀಸ್ ಠಾಣೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಭೇಟಿ ನೀಡಿದ್ದ ವೇಳೆ ನಿರ್ಲಕ್ಷ್ಯ ವಹಿಸಿದ ಆರೋಪ ಕೇಳಿ ಬಂದಿತ್ತು.
ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ವಿನೋಬನಗರ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ್ದರು, ಇಲಾಖೆ ತನಿಖೆಯ ವೇಳೆ ಸರಿಯಾಗಿ ಕಡತ ವಿಲೇವಾರಿ ಮಾಡಿರಲಿಲ್ಲ. ಹಿರಿಯ ಅಧಿಕಾರಿಗಳು ಠಾಣೆಗೆ ಬಂದಾಗ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ ಈ ಹಿನ್ನಲೆಯಲ್ಲಿ ಇನ್ ಸ್ಪೆಕ್ಟರ್ ಚಂದ್ರಕಲಾ ಅವರನ್ನು ಒಂದು ತಿಂಗಳ ಕಾಲ ಅಮಾನತು ಮಾಡಿ ಎಸ್ಪಿ ಆದೇಶಿಸಿದ್ದಾರೆ. ಅವರನ್ನು ತನಿಖೆಗೊಳಪಡಿಸಲಾಗುವುದು ಎನ್ನಲಾಗಿದೆ.