ಬೆಂಗಳೂರು: ಪೊಲೀಸರ ವಶದಲ್ಲಿದ್ದ ಕೊಲೆ ಆರೋಪಿ ಸಾವನ್ನಪ್ಪಿದ್ದಾನೆ. ಶೇಷಾದ್ರಿಪುರಂ ನಿವಾಸಿ ಮಂಜುನಾಥ್(36) ಮೃತಪಟ್ಟ ಆರೋಪಿ ಎಂದು ಹೇಳಲಾಗಿದೆ.
ಮಹಾಲಕ್ಷ್ಮಿ ಲೇ ಔಟ್ ಪೊಲೀಸರ ವಶದಲ್ಲಿದ್ದ ಆರೋಪಿ ಮಂಜುನಾಥ್ ನನ್ನು ಏಪ್ರಿಲ್ 28ರಂದು ಪೊಲೀಸರು ಬಂಧಿಸಿದ್ದರು. ಮೇ 2ರಂದು ಹೊಟ್ಟೆನೋವು ಕಾರಣ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆರೋಪಿಗೆ ಪಿತ್ತ ಜನಕಾಂಗ ಮತ್ತು ಸಕ್ಕರೆ ಕಾಯಿಲೆ ಇತ್ತು. ಚಿಕಿತ್ಸೆ ಫಲಕಾರಿಯಾಗದೆ ಮೇ 3ರಂದು ಮಂಜುನಾಥ್ ಮೃತಪಟ್ಟಿದ್ದಾನೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.

