ಬೆಂಗಳೂರು: ವಿಧಾನಸೌಧದ ಮುಂದೆ ಅನುಮತಿ ಇಲ್ಲದೆ ಸಿನಿಮಾ ಪ್ರಮೋಷನ್ ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
‘ಹಳೇ ಸನ್ಯಾಸಿ ಕಂಗ್ರಾಜುಲೇಷನ್ಸ್ ಬ್ರದರ್’ ಎಂಬ ಚಿತ್ರದ ಪ್ರಮೋಷನ್ ಮಾಡಲಾಗುತ್ತಿತ್ತು. ಮದ್ಯದ ಬಾಟಲಿಯ ಮೇಲೆ ಟೈಟಲ್ ಬರೆದು ಸಿನಿಮಾ ಪ್ರಮೋಷನ್ ಮಾಡಲಾಗಿದೆ. ವಿಧಾನಸೌಧದ ಮುಂಭಾಗ ಫುಟ್ಪಾತ್ ಮೇಲೆ ಸಿನಿಮಾ ಪ್ರಮೋಷನ್ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅಪರಿಚಿತರ ವಿರುದ್ಧ ದಾಖಲಿಸಲಾಗಿದೆ.