ಬೆಂಗಳೂರು: ಮಧ್ಯ ಪ್ರಾಚ್ಯದಲ್ಲಿ ಯುದ್ಧ ಹಿನ್ನೆಲೆ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸರ್ಕಾರ ಗ್ಯಾಸ್ ಪೂರೈಕೆ ಮಾಡದಿದ್ದರೆ ಹೋಟೆಲ್ ಬಂದ್ ಮಾಡುತ್ತೇವೆ ಎಂದು ಹೋಟೆಲ್ ಒಕ್ಕೂಟದ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ ಹೇಳಿದ್ದಾರೆ.
ನಮ್ಮ ಬಳಿ ನಾಳೆ ಮಧ್ಯಾಹ್ನದವರೆಗೆ ಆಗುವಷ್ಟು ಸಿಲಿಂಡರ್ ಇದೆ. ಒಂದು ವೇಳೆ ಸರ್ಕಾರ ಗ್ಯಾಸ್ ಪೂರೈಸದಿದ್ದರೆ ಹೋಟೆಲ್ ಬಂದ್ ಮಾಡಲಾಗುವುದು. ಮೊದಲೇ ಮುನ್ಸೂಚನೆ ನೀಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ನಾವು ಹೋಟೆಲ್ ಬಂದ್ ಮಾಡುವುದಕ್ಕೆ ನಿರ್ಧಾರ ಕೈಗೊಂಡಿಲ್ಲ. ಆದರೆ ಸರ್ಕಾರ ನಮಗೆ ಸರಿಯಾಗಿ ಗ್ಯಾಸ್ ಸಿಲಿಂಡರ್ ಪೂರೈಸುತ್ತಿಲ್ಲ. ಸರ್ಕಾರ ಗ್ಯಾಸ್ ಪೂರೈಸದಿದ್ದರೆ ಎಲ್ಲಾ ಹೋಟೆಲ್ ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರ ಹದಿನೈದು ದಿನಗಳ ಮೊದಲೇ ನಮಗೆ ಮುನ್ಸೂಚನೆ ನೀಡಬೇಕಿತ್ತು. 70 ದಿನ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆಯಾಗುವುದಿಲ್ಲ ಎಂದು ತೈಲ ಕಂಪನಿಗಳು ಹೇಳಿದ್ದವು. ಈಗ ದಿಢೀರ್ ವಾಣಿಜ್ಯ ಬಳಕೆ ಸಿಲಿಂಡರ್ ನಿಲ್ಲಿಸಿದ್ದಾರೆ. ನಾವು ಏನು ಮಾಡುವುದು ಎಂದು ಪ್ರಶ್ನಿಸಿದ್ದಾರೆ.
ಏಕಾಏಕಿ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ನಿಲ್ಲಿಸಿದರೆ. ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

