ಗದಗ: ಲಾರಿ ಡಿಕ್ಕಿಯಾಗಿ ಕಾರ್ ನಲ್ಲಿ ತೆರಳುತ್ತಿದ್ದ ಜೈಲು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಬೈರನಹಳ್ಳಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.
ಧಾರವಾಡ ಜೈಲಿನ ವಾರ್ಡರ್ ಸಂಗಪ್ಪ ಮಜ್ಜಗಿ(41) ಮೃತಪಟ್ಟವರು ಎಂದು ಹೇಳಲಾಗಿದೆ. ಅವರು ಧಾರವಾಡದಿಂದ ಬಾಗಲಕೋಟೆ ಜಿಲ್ಲೆ ನೇರಲಗಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಬೈರನಹಳ್ಳಿ ಸಮೀಪ ಲಾರಿ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕಾರ್ ನಲ್ಲಿದ್ದ ಸಂಗಪ್ಪ ಮಜ್ಜಗಿ ಮೃತಪಟ್ಟಿದ್ದು, ಭಾರೀ ಪ್ರಯತ್ನದ ನಂತರ ಅವರ ಮೃತದೇಹ ಹೊರತೆಯೆಲಾಗಿದೆ. ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

