HomeKarnatakaBREAKING : ಬೆಂಗಳೂರಿಗರಿಗೆ ತಪ್ಪದ `ಚಿರತೆ’ ಕಾಟ : ನೈಸ್ ರಸ್ತೆ ಸಮೀಪ ಮತ್ತೆ `ಪ್ರತ್ಯಕ್ಷ’!

BREAKING : ಬೆಂಗಳೂರಿಗರಿಗೆ ತಪ್ಪದ `ಚಿರತೆ’ ಕಾಟ : ನೈಸ್ ರಸ್ತೆ ಸಮೀಪ ಮತ್ತೆ `ಪ್ರತ್ಯಕ್ಷ’!

ಬೆಂಗಳೂರು : ಬೆಂಗಳೂರಿನ ನೈಸ್ ರಸ್ತೆಯ ಸಮೀಪದ ಚಿಕ್ಕ ತೋಗುರು ಬಳಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕೆ ಆರ್ ಪುರಂ ಅರಣ್ಯ ವಲಯ ವ್ಯಾಪ್ತಿಯ ಚಿಕ್ಕ ತೋಗುರಿನಲ್ಲಿ ನಿನ್ನೆ ರಾತ್ರಿ 7.40 ರ ಸುಮಾರಿಗೆ ಚಿರತೆ ಮನೆಯೊಂದಕ್ಕೆ ಬಂದಿದೆ. ಈ ವೇಳೆ  ಮನೆ ಬಾಗಿಲಿಗೆ ಬಂದ ತಕ್ಷಣ ಚಿರತೆಯನ್ನು ಕಂಡು ಬಾಲಕ ಕೂಗಿಕೊಂಡಿದ್ದಾನೆ. ಕೂಡಲೇ ಚಿರತೆ ಓಡಿ ಹೋಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದಿರುವ ಅರಣ್ಯ ಸಿಬ್ಬಂದಿ ಚಿರತೆ ಓಡಾಟವನ್ನು ಪರಿಶೀಲನೆ ನಡೆಸಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚಿಗೆ ಬೆಂಗಳೂರಿನಲ್ಲಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಡುವಂತಾಗಿತ್ತು, ಕೊನೆಗೆ ಸೆರೆ ಸಿಗದ ಚಿರತೆ ಗುಂಡೆಟಿಗೆ ಬಲಿಯಾಗಿತ್ತು.

For Latest News Updates, Join Our Whatsapp Community🚩
RELATED ARTICLES

Most Popular